ಅಮರನಾಥ್‌ ದುರಂತ: ಮೈಸೂರು, ಬೀದರ್, ಶಿವಮೊಗ್ಗದ ಪ್ರವಾಸಿಗರು ಬೇಸ್‌ ಕ್ಯಾಂಪ್‌ನಲ್ಲಿ ಸೇಫ್

ಜೂ.30 ರಂದಷ್ಟೇ ಆರಂಭವಾಗಿದ್ದ ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆ (Amarnath Yatra)  ಶುಕ್ರವಾರ ಭಾರೀ ಅನಾಹುತವೊಂದಕ್ಕೆ ಸಾಕ್ಷಿಯಾಗಿದೆ. ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರದೇಶದಲ್ಲಿ  ಮೇಘಸ್ಫೋಟ (Cloud Burst) ಸಂಭವಿಸಿದ ಕಾರಣ ಗುಹೆಯ ಸಮೀಪದಲ್ಲೇ ದಿಢೀರ್‌ ಭಾರೀ ಪ್ರವಾಹ ಕಾಣಿಸಿಕೊಂಡಿದೆ.

Share this Video
  • FB
  • Linkdin
  • Whatsapp

ಜೂ.30 ರಂದಷ್ಟೇ ಆರಂಭವಾಗಿದ್ದ ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆ (Amarnath Yatra) ಶುಕ್ರವಾರ ಭಾರೀ ಅನಾಹುತವೊಂದಕ್ಕೆ ಸಾಕ್ಷಿಯಾಗಿದೆ. ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರದೇಶದಲ್ಲಿ ಮೇಘಸ್ಫೋಟ (Cloud Burst) ಸಂಭವಿಸಿದ ಕಾರಣ ಗುಹೆಯ ಸಮೀಪದಲ್ಲೇ ದಿಢೀರ್‌ ಭಾರೀ ಪ್ರವಾಹ ಕಾಣಿಸಿಕೊಂಡಿದೆ.

ಮೈಸೂರಿನ 10 ಜನ ವಕೀಲರ ತಂಡ ಅಮರನಾಥ ಪ್ರವಾಸಕ್ಕೆ ತೆರಳಿತ್ತು. ಯಾವುದೇ ಅಪಾಯಕ್ಕೆ ಸಿಲುಕದೇ ಸದ್ಯ ಬೇಸ್ ಕ್ಯಾಂಪ್‌ನಲ್ಲಿ ಸುರಕ್ಷಿತವಾಗಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಬೀದರ್‌ನಿಂದ ಹೋದ 10 ಮಂದಿ ಕೂಡಾ ಸೇಫ್ ಆಗಿದ್ದಾರೆ. 

ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆಯ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಸಂಜೆ ಭಾರೀ ಮಳೆಯಾಗಿದ್ದು, ಸಂಜೆ 5.30ರ ವೇಳೆಗೆ ಮೇಘಸ್ಫೋಟ ಕೂಡಾ ಸಂಭವಿಸಿದೆ. ಪರಿಣಾಮ ಬೆಟ್ಟಗುಡ್ಡಗಳಿಂದ ಭಾರೀ ಪ್ರಮಾಣದ ನೀರು ಗುಹೆಯ ಪಕ್ಕದಲ್ಲೇ ಪ್ರವಾಹೋಪಾದಿಯಲ್ಲಿ ಹರಿದುಬಂದಿದೆ. ಹೀಗಾಗಿ ಗುಹೆಯಿಂದ 2 ಕಿ.ಮೀ. ದೂರದಲ್ಲಿ ಹಾಕಲಾಗಿದ್ದ 25 ಟೆಂಟ್‌ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅದಲ್ಲಿದ್ದವರೂ ನೀರು ಪಾಲಾಗಿದ್ದಾರೆ. ಈವರೆಗೂ 13 ಜನರು ಸಾವನ್ನಪ್ಪಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇನ್ನೂ 40 ಜನರು ನಾಪತ್ತೆಯಾಗಿರುವ ಶಂಕೆ ಇದೆ.

Related Video