ಯಾವ ರಾಜ್ಯ ಯಾರ ಪಾಲು..? 5 ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಪಟ್ಟ..?
ಈಗ ಸಿಕ್ಕಾಯ್ತು ಪಕ್ಕಾ ಅಂಕಿ ಅಂಶ!
ಬಿಜೆಪಿ-ಕಾಂಗ್ರೆಸ್ ಕಾಳಗದ ಕಥೆ ಏನು!
ಎಕ್ಸಿಟ್ ಪೋಲ್ ರೀಸಲ್ಟ್ ಏನ್ ಹೇಳ್ತಿದೆ?
ರಾಜಸ್ಥಾನ, ಮಧ್ಯಪ್ರದೇಶ, ಚತ್ತಿಸ್ಘಡ, ತೆಲಂಗಾಣ ಮತ್ತು ಮಿಜೋರಾಮ್ ಚುನಾವಣೆಗಳನ್ನ, ರಾಷ್ಟ್ರ ರಾಜಕಾರಣದ ದಿಕ್ಸೂಚಿ ಅನ್ನೋ ಹಾಗೆ ನೋಡ್ತಾ ಇದಾರೆ. ಈ ಪಂಚ ರಾಜ್ಯ ಚುನಾವಣೆಗಳಲ್ಲಿ(5 States Election) ಯಾರು ಮುನ್ನಡೆ ಸಾಧಿಸ್ತಾರೋ, ಅವರಿಗೆ ಲೋಕಸಮರದ(Lok Sabha) ಗೆಲುವು ಸಹ ಸುಲಭ ಅನ್ನೋ ಲೆಕ್ಕಾಚಾರವಿದೆ. ಈಗಾಗಲೇ ಐದೂ ರಾಜ್ಯಗಳಲ್ಲಿ ಎಲೆಕ್ಷನ್ ಮುಗಿದ ಅಧ್ಯಾಯ. ಜನ ಯಾರನ್ನ ಎಲೆಕ್ಟ್ ಮಾಡಿದ್ದಾರೆ ಅನ್ನೋದು ಮತಪೆಟ್ಟಿಗೆಗಳಲ್ಲಿ ಭದ್ರವಾಗಿ ಕೂತಿದೆ. ಆದ್ರೆ ಅದರಲ್ಲಿ ಯಾವ ರಹಸ್ಯ ಅಡಗಿದೆ ಅನ್ನೋ ಕುತೂಹಲ ಇಡೀ ದೇಶವನ್ನೇ ಕಾಡ್ತಾ ಇದೆ. ಆ ಕಾಡ್ತಾ ಇರೋ ಪ್ರಶ್ನೆಗೆ ಉತ್ತರ ಕೊಡೋಕೆ, ಎಕ್ಸಿಟ್ ಪೋಲುಗಳು(Exit Poll) ಪ್ರಯತ್ನ ಪಡ್ತಾ ಇವೆ. ಎಕ್ಸಿಟ್ ಪೋಲ್ ಅನ್ನೋದು ಗೆಲುವಿನ ನಿಖರ ವರದಿ ಹೇಳಲ್ಲ. ಆದ್ರೆ, ಗೆಲುವು ಯಾರ ಕಡೆ ವಾಲಿದೆ, ಯಾವ ರಾಜಕೀಯ ರಣರಂಗ ಯಾವ ಪರಿ ರಂಗಾಗಿದೆ ಅನ್ನೋದನ್ನ ಹೇಳುತ್ತೆ. ಕೆಲವು ವರದಿಗಳ ಪ್ರಕಾರ, ಸಟ್ಟಾ ಬಜಾರಿನ ಲೆಕ್ಕಾಚಾರದ ಹಾಗೆ, ಛತ್ತಿಸ್‌ಗಢದಲ್ಲಿ ಕಾಂಗ್ರೆಸ್ ಮುಂದಿದ್ರೆ, ತೆಲಂಗಾಣದಲ್ಲಿ ಬಿಆರ್‌ಎಸ್(BRS) ಹಾಗೂ ಕಾಂಗ್ರೆಸ್(Congress) ಸಮಬಲ ಹೊಂದೋ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ಬಿಜೆಪಿ 106 ಕ್ಷೇತ್ರಗಳನ್ನ ಗೆದ್ರೆ, ಕಾಂಗ್ರೆಸ್ 117 ಕ್ಷೇತ್ರಗಳನ್ನ ಗೆಲ್ಲೋ ಸಾಧ್ಯತೆ ಇದೆ. ಇನ್ನು ರಾಜಸ್ಥಾನ ಅನಾಯಾಸವಾಗಿ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ ಅಂತಿದೆ.ಈ ಪಂಚರಾಜ್ಯ ಚುನಾವಣೆಗಳ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆದಿದ್ದು ತೆಲಂಗಾಣದ ಚುನಾವಣೆ. ಕಾಂಗ್ರೆಸ್, ಬಿಜೆಪಿ ಹಾಗೂ ಕೆಸಿಆರ್ ನೇತೃತ್ವದ ಬಿಆರ್‌ಎಸ್, ಮೂರೂ ಪಾರ್ಟಿಗಳಿಗೂ ಪ್ರತಿಷ್ಠೆಯ ಕಣವಾಗಿ ಬದಲಾಗಿದ್ದ ರಾಜ್ಯ ಇದು.
ಇದನ್ನೂ ವೀಕ್ಷಿಸಿ: ಹೆತ್ತ ಮಗನೇ ತಾಯಿಯ ಹೆಣ ಹಾಕಿಬಿಟ್ಟನಾ..? ಪುತ್ರನ ನಡವಳಿಕೆ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!