ಜಮ್ಮು-ಕಾಶ್ಮೀರದ ದೋಡಾದಲ್ಲಿ ಉಗ್ರರ ಅಟ್ಟಹಾಸ! ಹುತಾತ್ಮ ಯೋಧರಿಗೆ ರಾಜನಾಥ್ ಸಿಂಗ್ ಶ್ರದ್ದಾಂಜಲಿ..!
ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಮುಂದುವರೆದಿದೆ. ಕಾಶ್ಮೀರದ ದೊಡಾ ಜಿಲ್ಲೆಯಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಜಮ್ಮು-ಕಾಶ್ಮೀರದ (Jammu and Kashmir) ದೋಡಾ ಜಿಲ್ಲೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರು-ಭಾರತೀಯ ಯೋಧರ ನಡುವೆ ಗುಂಡಿನ ಕಾಳಗ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಓರ್ವ ಯೋಧನಿಗೆ(soldiers) ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೋಡಾದಲ್ಲಿ(Doda Encounter) ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ. ನಿನ್ನೆ ಸಂಜೆ ದೋಡಾದಿಂದ 55 ಕಿ.ಮೀ ದೂರದಲ್ಲಿ ಕಾರ್ಯಾಚರಣೆ ನಡೆಸಿದ್ದು, ರಾತ್ರಿ 7.45ರ ಸುಮಾರಿಗೆ ಉಗ್ರರು-ಭದ್ರತಾ ಪಡೆ ಮಧ್ಯೆ ಫೈರಿಂಗ್ ನಡೆದಿದೆ. ರಾಷ್ಟ್ರೀಯ ರೈಫಲ್ಸ್, ಜ-ಕಾ ಪೊಲೀಸರ (Police) ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿದೆ. ದೋಡಾ ಅರಣ್ಯದೊಳಗೆ ಅಡಗಿಕೊಂಡಿದ್ದ ಶಸ್ತ್ರಸಜ್ಜಿತ 6 ರಿಂದ 8 ಉಗ್ರರು ಇರಬಹುದು. ಅತ್ಯಂತ ಕಠಿಣ ಭೂಪ್ರದೇಶದಲ್ಲೂ ಯೋಧರಿಂದ ಕಾರ್ಯಾಚರಣೆ ನಡೆಸಲಾಗಿದೆ. ಉಗ್ರರ ಗುಂಡಿನ ದಾಳಿಗೆ ಸೇನಾಧಿಕಾರಿ ಸೇರಿ ಐವರು ಯೋಧರಿಗೆ ಗಾಯವಾಗಿದೆ.
ಇದನ್ನೂ ವೀಕ್ಷಿಸಿ: ಮೊನಾಲಿಸಾ ನೆನಪಲ್ಲಿ ‘ಗೌರಿ’ ಹಾಡು ಬಿಡುಗಡೆ: ಈ ಸಿನಿಮಾಗೆ 20 ವರ್ಷದ ಸಂಭ್ರಮ!