10 ಗಂಟೆಗಳ ಅಂತರದಲ್ಲಿ ಬಿದ್ದಿದ್ದು 2 ಹೆಣ..! ಸಂಜೆ ಬಿದ್ದ ಹೆಣಕ್ಕೆ ಬೆಳಗ್ಗೆ ಪ್ರತೀಕಾರ..! ಬಿಜೆಪಿ ನಾಯಕನ ಮರ್ಡರ್‌ ಸ್ಟೋರಿ..

ಬಿಜೆಪಿ ಮುಖಂಡ ರಂಜಿತ್ ಕೊಲೆಯಾಗೋ ಕೆಲವೇ ಗಂಟೆಗಳ ಮುನ್ನ ಅದೇ ಆಲಪುಳ್ಳದ SDPIನ ಕಾರ್ಯಕರ್ತನ್ನಾಗಿದ್ದ ಶಾನ್ ಅನ್ನೋನ ಮರ್ಡರ್ ಆಗಿತ್ತು. ಈ ಕೊಲೆಗೆ ಬಿಜೆಪಿ, ಆರ್‌ಎಸ್‌ಎಸ್‌ ಕಾರಣ ಎಂದು ರಂಜಿತ್‌ ಶ್ರೀನಿವಾಸನ್ ಕೊಲೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬಿಜೆಪಿ ಮುಖಂಡ ರಂಜಿತ್ ಕೊಲೆಯಾಗೋ ಕೆಲವೇ ಗಂಟೆಗಳ ಮುನ್ನ ಅದೇ ಆಲಪುಳ್ಳದ SDPIನ ಕಾರ್ಯಕರ್ತನ್ನಾಗಿದ್ದ ಶಾನ್ ಅನ್ನೋನ ಮರ್ಡರ್ ಆಗಿತ್ತು.. ತನ್ನ ಬೈಕ್ನಲ್ಲಿ ಹೋಗುತ್ತಿದ್ದಾಗ ಕಾರ್ನಲ್ಲಿ ಬಂದ ಹಂತಕರ ಪಡೆ ಅವನನ್ನ ಕೆಳಗೆ ಬೀಳಿಸಿ ಕೊಲೆ ಮಾಡಿ ಹೋಗಿತ್ತು.. ಇನ್ನೂ ಈ ಕೊಲೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರಿಂದಲೇ ಆಗಿದ್ದು ಅನ್ನೋ ನಿರ್ಧಾರಕ್ಕೆ ಬರುವ ಕೆಲ ಕಿರಾತಕರು ಪ್ರತೀಕಾರಕ್ಕೆ ರೆಡಿಯಾಗಿಬಿಡ್ತಾರೆ.. ಅದಕ್ಕಾಗಿ ಒಂದು ಲಿಸ್ಟ್ ಕೂಡ ಮಾಡ್ತಾರೆ.. ಅದರಲ್ಲಿದ್ದ ಮೊದಲ ಹೆಸರೇ OBC ಮೋರ್ಚದ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್.. ಸೀದಾ ಗ್ಯಾಂಗ್ ರೆಡಿ ಮಾಡಿಕೊಂಡು ಹಂತಕರು ರಂಜಿತ್ ಮನೆಗೆ ಬೆಳ್ಳಂಬೆಳಗ್ಗೆ ನುಗ್ಗೇಬಿಡ್ತಾರೆ. ರಿವೆಂಜ್ ತಗೆದುಕೊಳ್ಳಲು ಹೋದವರಿಗೆ ಇವತ್ತು ಮರಣದಂಡನೆಯ ಶಿಕ್ಷೆ ಸಿಕ್ಕಿದೆ.

Related Video