India@75: ಸಂಸತ್‌ನಲ್ಲಿ ಬಾಂಬ್ ಸಿಡಿಸಿ ಬ್ರಿಟಷರ ನಿದ್ದೆಗಡಿಸಿದ್ದ ತರುಣ ಬಟುಕೇಶ್ವರ್ ದತ್
ಏಪ್ರಿಲ್ 08, 1929 ದೆಹಲಿಯ ಸಂಸತ್ ಭವನ, ಆಗ ವಿಠಲ್ ಭಾಯ್ ಪಟೇಲ್ ಸ್ಪೀಕರ್ ಆಗಿದ್ರು. ಸದನದಲ್ಲಿ ಸ್ಪೀಕರ್ ಎದ್ದು ನಿಂತು ಸಾರ್ವಜನಿಕ ಸುರಕ್ಷೆ ಬಗ್ಗೆ ಮಾತನಾಡುತ್ತಿದ್ದಾಗ ಬಾಂಬ್ ಸ್ಫೋಟವಾಗುತ್ತದೆ. ಇಬ್ಬರು ಬ್ರಿಟಿಷ್ ಅಧಿಕಾರಿಗಳು ಗಾಯಗೊಂಡು ಕೆಳಗೆ ಬೀಳುತ್ತಾರೆ.
ಏಪ್ರಿಲ್ 08, 1929 ದೆಹಲಿಯ ಸಂಸತ್ ಭವನ, ಆಗ ವಿಠಲ್ ಭಾಯ್ ಪಟೇಲ್ ಸ್ಪೀಕರ್ ಆಗಿದ್ರು. ಸದನದಲ್ಲಿ ಸ್ಪೀಕರ್ ಎದ್ದು ನಿಂತು ಸಾರ್ವಜನಿಕ ಸುರಕ್ಷೆ ಬಗ್ಗೆ ಮಾತನಾಡುತ್ತಿದ್ದಾಗ ಬಾಂಬ್ ಸ್ಫೋಟವಾಗುತ್ತದೆ. ಇಬ್ಬರು ಬ್ರಿಟಿಷ್ ಅಧಿಕಾರಿಗಳು ಗಾಯಗೊಂಡು ಕೆಳಗೆ ಬೀಳುತ್ತಾರೆ. ಈ ಗೊಂದಲ, ಗಲಿಬಿಲಿ ನಡುವೆ ಬಾಂಬ್ ಹಾಕಿದ ಇಬ್ಬರು ತರುಣರು ಪ್ರೇಕ್ಷಕರ ಗ್ಯಾಲರಿಯಿಂದ ಎದ್ದು ನಿಲ್ಲುತ್ತಾರೆ. ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗುತ್ತಾರೆ. ಆ ಯುವಕರೇ ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್. ಕೆಲ ತಿಂಗಳ ಹಿಂದೆ ಕ್ರಾಂತಿ ಸೇನಾನಿ ಲಾಲಾ ಲಜಪತ್‌ರಾಯ್ ಪೊಲಿಸರ ಚಿತ್ರಹಿಂಸೆಯಿಂದ ನರಳಿ ಪ್ರಾಣಬಿಟ್ಟಿದ್ದರು. ಅವರ ಸಾವಿನ ಪ್ರತಿಕಾರವಾಗಿ ಭಗತ್ ಸಿಂಗ್, ಬಟುಕೇಶ್ವರ್ ದತ್ ಸಂಸತ್ ಭವನಕ್ಕೆ ಬಾಂಬ್ ಹಾಕುತ್ತಾರೆ.