India@75: ಬ್ರಿಟಿಷರ ಎದೆ ನಡುಗಿಸಿದ ಹಿಂದೂ- ಜರ್ಮನ್ ಪಿತೂರಿ ಪ್ರಕರಣ!
ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ಅವುಗಳ ಪೀಕಿ, ವಿದೇಶಿ ನೆಲದಿಂದಲೇ ಬ್ರಿಟಿಷರ ಎದೆ ನಡುಗಿಸಿದ ಹಿಂದೂ- ಜರ್ಮನ್ ಪಿತೂರಿ ಪ್ರಕರಣ ಕೂಡಾ ಒಂದು.
ಬೆಂಗಳೂರು (ಜೂನ್ 27): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ. ವಿದೇಶದಿಂದಲೇ ಭಾರತದ ಪರವಾಗಿ ಸಂಚು ಹೂಡಿ ಬ್ರಿಟಿಷರ ಎದೆ ನಡುಗಿಸಿದ ಹಿಂದೂ ಜರ್ಮನ್ ಪಿತೂರಿ ಪ್ರಕರಣ (Hindu German Conspiracy) ಇತಿಹಾಸದಲ್ಲಿ ಮರೆಯಲು ಸಾಧ್ಯವಿಲ್ಲದಂಥ ಘಟನೆ.
ಭಾರತದ ಸ್ವಾತಂತ್ರ್ಯದ ಪುಟದಲ್ಲಿ ಅಜ್ಞಾತವಾಗಿ ಉಳಿದ ಪುಟಗಳಲ್ಲಿ ಅಮೆರಿಕದ (USA) ಪ್ರಕರಣವೂ ಒಂದು. ಅದು 1917ರ ಹಿಂದೂ-ಜರ್ಮನ್ ಪಿತೂರಿ ಪ್ರಕರಣ. ಅಮೆರಿಕ ಮೂಲದ ಹಿಂದೂಸ್ತಾನ್ ಗದರ್ ಪಾರ್ಟಿ ಹಾಗೂ ಜರ್ಮನಿಯ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ನ ಅನಿವಾಸಿ ಭಾರತೀಯರು ಈ ಪಿತೂರಿಯಲ್ಲಿ ಭಾಗಿಯಾಗಿದ್ದರು.
India@75: ಪಿಕೆಟಿಂಗ್ ಚಳವಳಿಗೆ ಸಾಕ್ಷಿ ಮಂಡ್ಯದ ಫ್ರೆಂಚ್ ರಾಕ್ಸ್ ಸಂತೆ
ಭಾರತ, ಅಮೆರಿಕ ಹಾಗೂ ಯುರೋಪ್‌ನ ಹಲವು ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವುದು ಇವರ ಯೋಜನೆಯಾಗಿತ್ತು. ಈ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಜಗತ್ತಿನ ಮುಂದೆ ಬ್ರಿಟನ್ ದೇಶದ ಕ್ರೌರ್ಯವನ್ನು ಬಿಚ್ಚಿಡುವುದು ಇವರ ಯೋಜನೆಯಾಗಿತ್ತು.