India@75: ಬ್ರಿಟಿಷರ ವಿರುದ್ಧ ಹೋರಾಡಿದ ಅಯೋಧ್ಯೆಯ ಹಿಂದೂ ಮುಸ್ಲಿಮರು
ಅಯೋಧ್ಯೆ ಅಂದ್ರೆ ಹಿಂದೂ ಮುಸ್ಲಿಂ ನಡುವೆ ಹಗೆತನ ತುಂಬಿದ ಅನೇಕ ಘಟನೆಗಳು ನೆನಪಾಗುತ್ತವೆ. ಆದರೆ ಹಿಂದೂ ಮುಸ್ಲಿಂಮರು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ಉದಾಹರಣೆಯೂ ಇದೆ. ಆದರೆ ಇದು ರಾಜಕೀಯ ಉದ್ದೇಶಗಳಿಗಾಗಿ ಮುಚ್ಚಿ ಹೋಗುತ್ತಿರುವುದು ವಿಪರ್ಯಾಸ.
ಅಯೋಧ್ಯೆ ಅಂದ್ರೆ ಹಿಂದೂ ಮುಸ್ಲಿಂ ನಡುವೆ ಹಗೆತನ ತುಂಬಿದ ಅನೇಕ ಘಟನೆಗಳು ನೆನಪಾಗುತ್ತವೆ. ಆದರೆ ಹಿಂದೂ ಮುಸ್ಲಿಂಮರು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ಉದಾಹರಣೆಯೂ ಇದೆ. ಆದರೆ ಇದು ರಾಜಕೀಯ ಉದ್ದೇಶಗಳಿಗಾಗಿ ಮುಚ್ಚಿ ಹೋಗುತ್ತಿರುವುದು ವಿಪರ್ಯಾಸ. ಹನುಮಾನ್ ಗರೀ ದೇವಾಲಯದ ಅರ್ಚಕರಾದ ಬಾಬಾ ರಾಮ್ ಚರನ್ ದಾಸ್ ಹಾಗೂ ಮೌಲ್ವಿ ಅಮೀರ್ ಅಲಿ 1857 ರಲ್ಲಿ ಬ್ರಿಟಿಷರ ವಿರುದ್ಧ ಜನ ದಂಗೆ ಏಳುವಂತೆ ಮಾಡುತ್ತಾರೆ. ಮುಂದೆ ಬ್ರಿಟಿಷರ ನಿದ್ದೆಗೆಡಿಸಿದವರು ಪೈಝಾಬಾದ್‌ನ ಸೇನಾಧಿಪತಿ ಅಕ್ಕನ್ ಖಾನ್ ಹಾಗೂ ಶಂಭು ಪ್ರಸಾದ್ ಶುಕ್ಲ. ಇವರಿಬ್ಬರ ಜೋಡಿ ಸಾಕಷ್ಟು ಅಭಿಯಾನವನ್ನು ನಡೆಸಿತು. ಹಿಂದೂ ಮುಸ್ಲಿಮರು ಒಗ್ಗಟ್ಟಾದರೆ ಮಾತ್ರ ಭಾರತಕ್ಕೆ ಜಯ ಎಂಬುದನ್ನು ಸಾರಿ ಹೇಳಿದ್ದು ಅಯೋಧ್ಯೆಯ ಸ್ವಾತಂತ್ರ್ಯ ಹೋರಾಟ.
India@75: ಅತ್ತಿಂಗಲ್ ದಂಗೆ- ಬ್ರಿಟಿಷರ ವಿರುದ್ಧ ಸಾಮಾನ್ಯ ಜನರ ಹೋರಾಟ