India@75: ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ

ಗಂಡು ಮೆಟ್ಟಿದ ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಇಂಗ್ಲೀಷರ ವಿರುದ್ದ ಹೋರಾಡುತ್ತಾ ವೀರ ಮರಣ ಅಪ್ಪಿದ ವೀರ ವನಿತೆ. ಇವರು ಹುಟ್ಟಿದ್ದು 1778 ರಲ್ಲಿ, ಉತ್ತರ ಕರ್ನಾಟಕದ ಬೆಳಗಾವಿಯ ಸಣ್ಣ ಹಳ್ಳಿ ಕಾಕತಿಯ ಲಿಂಗಾಯತ ಕುಟುಂಬದಲ್ಲಿ.

Share this Video
  • FB
  • Linkdin
  • Whatsapp

ಗಂಡು ಮೆಟ್ಟಿದ ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಇಂಗ್ಲೀಷರ ವಿರುದ್ದ ಹೋರಾಡುತ್ತಾ ವೀರ ಮರಣ ಅಪ್ಪಿದ ವೀರ ವನಿತೆ. ಇವರು ಹುಟ್ಟಿದ್ದು 1778 ರಲ್ಲಿ, ಉತ್ತರ ಕರ್ನಾಟಕದ ಬೆಳಗಾವಿಯ ಸಣ್ಣ ಹಳ್ಳಿ ಕಾಕತಿಯ ಲಿಂಗಾಯತ ಕುಟುಂಬದಲ್ಲಿ. ಚಿಕ್ಕ ವಯಸ್ಸಿನಲ್ಲೇ ಕುದುರೆ ಸವಾರಿ, ಕತ್ತಿ ವರಸೆ ಕಲಿಯುತ್ತಾರೆ. ಮುಂದೆ ದೇಸಾಯಿ ಕುಟುಂಬದ ದೊರೆ ಮಲ್ಲಸರ್ಜನ ಜೊತೆ ಚೆನ್ನಮ್ಮನ ವಿವಾಹವಾಯಿತು. ದುರಾದೃಷ್ಟವಶಾತ್ ಮಲ್ಲಸರ್ಜ ಅಕಾಲಿಕ ಮರಣ ಹೊಂದುತ್ತಾನೆ. ದತ್ತುಮಗ ಶಿವಲಿಂಗನನ್ನು ರಾಜ್ಯದ ದೊರೆ ಎಂದು ತೀರ್ಮಾನಿಸಲಾಯಿತು.

India@75:ಬ್ರಿಟಿಷರ ವಿರುದ್ಧ ಹೋರಾಡಿದ ತಮಿಳು ರಾಣಿ ವೇಲು ನಾಚಿಯಾರ್, ಸೇನಾಧಿಕಾರಿ ಕುಯಿಲಿ

 ಇದನ್ನು ಬಳಸಿಕೊಂಡ ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ತಂದು ಕಿತ್ತೂರನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಾರೆ. ಅದರೆ ಇದಕ್ಕೆ ಚೆನ್ನಮ್ಮ ಸೊಪ್ಪುಹಾಕಿಲ್ಲ. ಮುಂದೆ ಚೆನ್ನಮ್ಮ ಬ್ರಿಟಿಷರ ವಿರುದ್ಧ ತಿರುಗಿ ನಿಲ್ಲುತ್ತಾಳೆ. ಈಕೆಯ ಧೈರ್ಯ, ಸಾಹಸ, ತ್ಯಾಗ ಭಾರತದ ಚರಿತ್ರೆಯಲ್ಲಿ ಅಜರಾಮರ. 

Related Video