India@75: ಬ್ರಿಟಿಷರ ವಿರುದ್ಧ ಹೋರಾಡಿದ ತಮಿಳು ರಾಣಿ ವೇಲು ನಾಚಿಯಾರ್, ಸೇನಾಧಿಕಾರಿ ಕುಯಿಲಿ
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಬ್ರಿಟಿಷರ ಅಕ್ರಮಣದ ವಿರುದ್ಧ ಹೋರಾಡುತ್ತಾ ಭಾರತದ ಅನೇಕ ವೀರನಾರಿಯರು ಪ್ರಾಣಾರ್ಪಣೆ ಮಾಡಿದ್ದಾರೆ.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಬ್ರಿಟಿಷರ ಅಕ್ರಮಣದ ವಿರುದ್ಧ ಹೋರಾಡುತ್ತಾ ಭಾರತದ ಅನೇಕ ವೀರನಾರಿಯರು ಪ್ರಾಣಾರ್ಪಣೆ ಮಾಡಿದ್ದಾರೆ. ತಮಿಳುನಾಡಿನ ರಾಣಿ ವೇಲು ನಾಚಿಯಾರ್ ಹಾಗೂ ಮಹಿಳಾ ಸೇನಾಧಿಕಾರಿ ಕುಯಿಲಿ ಬ್ರಿಟಿಷರ ಶಸ್ತ್ರಾಸ್ತ್ರ ಸಂಗ್ರಹಗಾರಕ್ಕೆ ಕೊಳ್ಳಿ ಇಟ್ಟು ಹುತಾತ್ಮರಾದವರು. 18 ನೇ ಶತಮಾನದ ಕ್ರಾಂತಿಯ ಮುಂಚೂಣಿಯಲ್ಲಿದ್ದವರು ಈ ವೀರ ನಾರಿಯರು. ತಮಿಳುನಾಡಿನ ರಾಮನಾಥಪುರದ ರಾಣಿ ವೇಲು ನಾಚಿಯಾರ್. ಚಿಕ್ಕ ವಯಸ್ಸಿನಲ್ಲಿ ಮೇಧಾವಿ ಹುಡುಗಿ ಈಕೆ. ಮುಂದೆ ಬ್ರಿಟಿಷರ ವಿರುದ್ಧ ತಿರುಗಿ ಬೀಳುತ್ತಾಳೆ. ಹೈದರಾಲಿ ಜೊತೆ ಒಪ್ಪಂದ ಮಾಡಿಕೊಂಡು ಬ್ರಿಟಿಷ್ ಶಸ್ತ್ರಾಸ್ತ್ರಗಾರಕ್ಕೆ ದಾಳಿ ಮಾಡಲು ಪ್ಲ್ಯಾನ್ ಮಾಡುತ್ತಾರೆ. ಆಗ ರಾಣಿಗೆ ಸಾಥ್ ಕೊಟ್ಟಿದ್ದು ಸೇನಾಧಿಕಾರಿ ಕುಯಿಲಿ.