India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟೆವರೆಗೆ ಸಂಘಟಿಸಿರುವ 8 ದಿನದ ಯುವಜನ ಸಂಕಲ್ಪ ನಡಿಗೆ 75 ಕಿಮೀ ಉದ್ದದ ಪಾದಯಾತ್ರೆ ಕಾರ್ಯಕ್ರಮದಲ್ಲಿ ವೈಭವದ ದೃಶ್ಯಗಳು, ಮೈಮನಗಳು ನಿಬ್ಬೆರಗಾಗುವಂತೆ ಬೆರಗುಗೊಳಿಸಿದವು.

First Published Aug 7, 2022, 5:13 PM IST | Last Updated Aug 7, 2022, 5:13 PM IST

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟೆವರೆಗೆ ಸಂಘಟಿಸಿರುವ 8 ದಿನದ ಯುವಜನ ಸಂಕಲ್ಪ ನಡಿಗೆ 75 ಕಿಮೀ ಉದ್ದದ ಪಾದಯಾತ್ರೆ ಕಾರ್ಯಕ್ರಮದಲ್ಲಿ ವೈಭವದ ದೃಶ್ಯಗಳು, ಮೈಮನಗಳು ನಿಬ್ಬೆರಗಾಗುವಂತೆ ಬೆರಗುಗೊಳಿಸಿದವು.

India@75:ದಕ್ಷಿಣದ ಜಲಿಯನ್ ವಾಲಾಬಾಗ್ ತಮಿಣುನಾಡಿನ ಪೆರುಂಗಮಣಲ್ಲೂರು

ದೇಶಭಕ್ತಿಯ ಅಭಿರುಚಿಯಲ್ಲಿ ಅಪಾರ ಸಂಖ್ಯೆಯ ಯುವಜನ ಸಮೂಹ ಸೇರಿದಂತೆ ಅಸಂಖ್ಯಾತ ಜನತೆ ತೆಲುವಂತೆ ಮಾಡಿದವು. ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ ಯುವ ಮನಗಳಲ್ಲಿ ಹರಿದಾಡಿದವು. ಅವರ ತ್ಯಾಗದ ಕಥಾ ಹಂದರ ಯುವಕರ ಮೊಗದಲ್ಲಿ ನುಸುಳಿ ದೇಶಾಭಿಮಾನದ ಕಿಚ್ಚು ಹುಟ್ಟಿಸಿದವು. ಸಾವಿರಾರು ಸಂಖ್ಯೆಯಲ್ಲಿ ಯುವಕ, ಯುವತಿಯರು ರಾಷ್ಟ್ರಧ್ವಜದ ವಿಶೇಷ ಉಡುಗೆಯಲ್ಲಿ ತ್ರಿವರ್ಣಧ್ವಜದ ಪೇಟಾ ತಲೆಗೆ ಸುತ್ತಿಕೊಂಡು ನಡಿಗೆಯಲ್ಲಿ ಭಾಗಿಯಾದರು.

ನಡಿಗೆ ಮೂಲಕ ದೇಶಭಕ್ತಿ ಕಿಚ್ಚು ಹೆಚ್ಚಿಸುತ್ತಿರುವ ಶಾಸಕ ನಡಹಳ್ಳಿ ಹಾಗು ಪುತ್ರ ಭರತಗೌಡರಿಗೆ ನಾಗರಿಕರು ಅಭಿನಂದಿಸಿದರು. ಬಳಿಕ ನಡಿಗೆಯಲ್ಲಿ ಲಂಬಾಣಿ ಸಮುದಾಯದ ಪುಟಾಣಿಗಳ ಜೊತೆಗೆ ಶಾಸಕ ನಡಹಳ್ಳಿ ಹಾಗೂ ಪುತ್ರ ಭರತಗೌಡ ಹೆಜ್ಜೆ ಹಾಕಿದರು.