Asianet Suvarna News Asianet Suvarna News

ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ

ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಕಾರ್ಪೊರೇಟ್ ಕಂಪೆನಿಗಳಿಂದಲೂ ರಾಷ್ಟ್ರಧ್ವಜಕ್ಕೆ ಆರ್ಡರ್ 

Aug 4, 2022, 11:32 PM IST

ಬೆಂಗಳೂರು(ಆ.04):  ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮನೆ ಮನೆಗಳಲ್ಲೂ ತಿರಂಗಾ ಹಾರಿಸುವ ಕೇಂದ್ರ ಸರ್ಕಾರದ ಘೋಷಣೆ ಯಶಸ್ವಿಗೊಳಿಸಲು ಬೆಂಗಳೂರಿನಲ್ಲಿ ಭರದ ಸಿದ್ಧತೆ ನಡೆದಿದೆ. ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಭರ್ಜರಿಯಾಗಿ ರಾಷ್ಟ್ರ ಧ್ವಜ ಮಾರಾಟವಾಗ್ತಿದೆ. ಮೋದಿ ಹರ್ ಘರ್ ತಿರಂಗಾ ಘೋಷಣೆ ಬಳಿಕ ಈ ಬಾರಿ ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ ವ್ಯಕ್ತವಾಗಿದೆ. ಮಾವಳ್ಳಿಯ ರಾಷ್ಟ್ರಧ್ವಜ ಮಾರಾಟ ಮಳಿಗೆಯಲ್ಲಿ  ದಿನಕ್ಕೆ 20 ರಿಂದ 30 ಸಾವಿರ ರಾಷ್ಟ್ರ ಧ್ವಜದ ಮಾರಾಟವಾಗುತ್ತಿದೆ. 

News Hour: ಪ್ರವೀಣ್ ನೆಟ್ಟಾರು ಹಂತಕರ ಬೇಟೆಗಿಳಿದ NIA: ಸರಣಿ ಹತ್ಯೆ ವರದಿ ಪಡೆದ ಅಮಿತ್ ಶಾ

ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಕಾರ್ಪೊರೇಟ್ ಕಂಪೆನಿಗಳಿಂದಲೂ ರಾಷ್ಟ್ರಧ್ವಜಕ್ಕೆ ಆರ್ಡರ್ ಬರುತ್ತಿದೆ. ಈಗಾಗಲೇ ಕಳೆದ 15 ದಿನಗಳಿಂದ 5 ಲಕ್ಷ ರಾಷ್ಟ್ರಧ್ವಜದ ಮಾರಾಟ ಮಾಡಲಾಗಿದೆ. ಜೊತೆಗೆ ಆಜಾದಿ ಕ ಅಮೃತ ಮಹೋತ್ಸವ ಎಂಬ ಟೋಪಿ, ಶಾಲು, ಬ್ಯಾಂಡ್ವಗಳಿಗೂ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. 5 ರೂಪಾಯಿಂದ 50 ಸಾವಿರದವರೆಗೂ ರಾಷ್ಟ್ರದ್ವಜ ಸಿಗುತ್ತಿದೆ. ಕಳೆದ ಹಲವು ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ನೂರು ಪಟ್ಟು ವ್ಯಾಪಾರ ಜಾಸ್ತಿಯಾಗಿದೆ ಅಂತ ಅಂಗಡಿ ಮಾಲೀಕ‌ ಅನಿಲ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಹೇಳಿದ್ದಾರೆ.