News Hour: ಪ್ರವೀಣ್ ನೆಟ್ಟಾರು ಹಂತಕರ ಬೇಟೆಗಿಳಿದ NIA: ಸರಣಿ ಹತ್ಯೆ ವರದಿ ಪಡೆದ ಅಮಿತ್ ಶಾ

Mangaluru Serial Murders: ಮಸೂದ್, ಫಾಜಿಲ್ ಕೊಲೆ ಕೇಸುಗಳಲ್ಲಿ ಪೊಲೀಸರು ಹಂತಕರ ಹೆಡೆಮುರಿ ಕಟ್ಟಿದ್ದಾರೆ ಆದರೆ ಪ್ರವೀಣ್ ನೆಟ್ಟಾರು ಹಂತಕರು ಮಾತ್ರ ಇದುವರೆಗೂ ಸಿಕ್ಕಿಲ್ಲ 
 

First Published Aug 4, 2022, 11:11 PM IST | Last Updated Aug 4, 2022, 11:11 PM IST

ಬೆಂಗಳೂರು (ಆ. 04):  ಮಸೂದ್, ಪ್ರವೀಣ್, ಫಾಜಿಲ್, ಮಂಗಳೂರಿನ ಮೂರು ಸರಣಿ ಕೊಲೆ ಬೆನ್ನತ್ತಿದ್ದ ಪೊಲೀಸರು ಎರಡು ಕೇಸುಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಪ್ರವೀಣ್ ನೆಟ್ಟಾರು ಹಂತಕರು ಮಾತ್ರ ಇದುವರೆಗೂ ಸಿಕ್ಕಿಲ್ಲ.ಎಡಿಜಿಪಿ ಅಲೋಕ್ ಕುಮಾರ್ ತನಿಖೆಯ ಪಿನ್ ಟು ಪಿನ್ ಮಾಹಿತಿ ಪಡೆಯುತ್ತಿದ್ದಾರೆ. ಇಂದು ಕೂಡ ಬೆಳ್ಳಾರೆ ಠಾಣೆಗೆ ಭೇಟಿ ನೀಡಿ ತನಿಖಾ ಪ್ರಗತಿ ಮಾಹಿತಿ ಪಡೆದ್ರು.  ಈ ನಡುವೆ ಇಂದಿನಿಂದ ಎನ್ಐಎ ಅಧಿಕಾರಿಗಳು ಪ್ರವೀಣ್ ಹಂತಕರ ಬೇಟೆಗೆ ಇಳಿದಿದ್ದಾರೆ. ಮೊದಲ ದಿನ ಪ್ರವೀಣ್ ಕೊಲೆಯಾದ ಜಾಗ, ಸಂಚು ರೂಪಿಸಿದ ಸ್ಥಳಗಳಿಗೆ ವಿಸಿಟ್ ಕೊಟ್ಟು ಮಾಹಿತಿ ಕಲೆಹಾಕಿದ್ದಾರೆ.

ಪ್ರವೀಣ್ ಹಂತಕರ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧಿಸ್ತೇವೆ ಎಂದು  ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.  ಈ ನಡುವೆ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವರು ಕೂಡ ಮಂಗಳೂರು ಸರಣಿ ಹತ್ಯೆಗಳ ವಿವರ ಪಡೆದಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿ - ಐಜಿಪಿ ಪ್ರವೀಣ್ ಸೂದ್ರಿಂದ ಅಮಿತ್ ಶಾ ಮಾಹಿತಿ ಪಡೆದುಕೊಂಡಿದ್ದಾರೆ.

ಸುರತ್ಕಲ್‌ನ ಫಾಝಿಲ್‌ ಹತ್ಯೆ: ಎಲ್ಲ ಬಂಧಿತರಿಗೆ ಹಿಂದು ಸಂಘಟನೆಗಳ ನಂಟು

ಇದೆಲ್ಲದರ ನಡುವೆ ಮಂಗಳೂರು ಅಪರಾಧ ಕೃತ್ಯಕ್ಕೆ ಬ್ರೇಕ್ ಹಾಕಲು ಪೊಲೀಸರು ಹೊಸ ರೂಲ್ಸ್ ಘೋಷಿಸಿದ್ದರು.  ಪುರುಷರು ಬೈಕಲ್ಲಿ ಡಬಲ್ ರೇಡ್ ಮಾಡುವಂತಿಲ್ಲ ಎನ್ನುವ ಆದೇಶ ಹೊರಡಿಸಿದ್ದರು. ಆದರೆ, ಸಾರ್ವಜನಿಕರ ವಿರೋಧದ ಬಳಿಕ ಮಂಗಳೂರು ಕಮಿಷನರ್ ಆದೇಶ ವಾಪಸ್ ಪಡೆದಿದ್ದಾರೆ.