India@75: ಬರಿಗಾಲಲ್ಲಿ ಆಡಿ ಬ್ರಿಟಿಷರನ್ನು ಸೋಲಿಸಿದ ಮೋಹನ್ ಬಾಗನ್‌ ತಂಡ

ಬ್ರಿಟಿಷರನ್ನ ಫುಟ್ಬಾಲ್‌ನಲ್ಲಿ ಸೋಲಿಸಿದ ಮೋಹನ್ ಬಾಗನ್‌ ತಂಡ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ಪೂರ್ತಿ ನೀಡಿದ ಕಥೆ ಇಲ್ಲಿದೆ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 21): ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಕಲ್ಕತ್ತಾದ ಪ್ರಖ್ಯಾತ್‌ ಮೋಹನ್‌ ಬಾಗನ್‌ (Mohun Bagan Football Team) ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್‌ ಕ್ಲಬ್‌. ಇದು ಸ್ಥಾಪನೆಯಾಗಿ 133 ವರ್ಷಗಳ ನಂತರವೂ ಮೋಹನ್‌ ಬಾಗನ್‌ ಭಾರತದ ಪ್ರಮುಖ ಫುಟ್ಬಾಲ್‌ ತಂಡವಾಗಿ ಉಳಿದಿದೆ. 

3 ವರ್ಷಗಳ ಹಿಂದೆ ಮೋಗನ್‌ ಬಾಗನ್‌ ತನ್ನು 130ನೇ ವರ್ಷಾಚರಣೆಯನ್ನು ಆಚರಿಸಿಕೊಂಡಾಗ ಜಗತ್ತಿನ ಅತೀ ಹಿರಿಯ ಫುಟ್ಬಾಲ್‌ ತಂಡಗಳ ಕ್ಲಬ್‌ "ದಿ ಕ್ಲಬ್‌ ಆಫ ಪಯೋನಿಯರ್ಸ್‌ಗೆʼ ಸೇರ್ಪಡೆಯಾಯಿತು. ಭಾರತದ ಸ್ವಾತಂತ್ರ ಚಳವಳಿಗೆ ಸ್ಪೂರ್ತಿ ನೀಡಿದ ಇತಹಾಸ ಕೂಡ ಮೋಹನ್‌ ಬಾಗನ್‌ಗೆ ಇದೆ. ಬ್ರಿಟಿಷರನ್ನ ಫುಟ್ಬಾಲ್‌ನಲ್ಲಿ ಸೋಲಿಸಿದ ಮೋಹನ್ ಬಾಗನ್‌ ತಂಡ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ಪೂರ್ತಿ ನೀಡಿದ ಕಥೆ ಇಲ್ಲಿದೆ

ಇದನ್ನೂ ನೋಡಿ:India@75: ಬ್ರಿಟಿಷರ ಜೊತೆಗೆ ಅಸ್ಪಶೃತೆ ವಿರುದ್ಧ ಹೋರಾಡಿದ ವೈಕಂ ಸತ್ಯಾಗ್ರಹ

Related Video