India@75: ಬ್ರಿಟಿಷರ ಜೊತೆಗೆ ಅಸ್ಪಶೃತೆ ವಿರುದ್ಧ ಹೋರಾಡಿದ ವೈಕಂ ಸತ್ಯಾಗ್ರಹ

ಭಾರತ ಸ್ವಾತಂತ್ರ ಹೋರಾಟ ಒಂದು ನಿರ್ಣಾಯಕ ಹಂತ ತಲುಪಿದಾಗ ಶುರುವಾಗಿದ್ದು ವೈಕಂ ಸತ್ಯಾಗ್ರಹ (Vaikam Satyagraha) ಅಸ್ಪೃಶ್ಯತೆಯ ವಿರುದ್ಧ ಹೋರಾಟ ಶುರು ಮಾಡಿದ ಬಳಿಕ ಕಾಂಗ್ರೆಸ್ ಶುರು ಮಾಡಿದ ಮೊದಲ ಚಳುವಳಿ.

First Published Jun 20, 2022, 4:06 PM IST | Last Updated Jun 20, 2022, 5:23 PM IST

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಇತಿಹಾಸದಲ್ಲಿ ಮರೆಯಾಗಿರುವ ಹೋರಾಟಗಾರರು, ಕೂಡುಗೆ ಸಲ್ಲಿಸಿದವರನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಸ್ತುತ ಪಡಿಸುತ್ತಿದೆ. ಭಾರತ ಸ್ವಾತಂತ್ರ ಹೋರಾಟ ಒಂದು ನಿರ್ಣಾಯಕ ಹಂತ ತಲುಪಿದಾಗ ಶುರುವಾಗಿದ್ದು ವೈಕಂ ಸತ್ಯಾಗ್ರಹ (Vaikam Satyagraha) ಅಸ್ಪೃಶ್ಯತೆಯ ವಿರುದ್ಧ ಹೋರಾಟ ಶುರು ಮಾಡಿದ ಬಳಿಕ ಕಾಂಗ್ರೆಸ್ ಶುರು ಮಾಡಿದ ಮೊದಲ ಚಳುವಳಿ.

India@75:ಅಕ್ಕಮ್ಮ ಚೆರಿಯನ್- ಸ್ವಾತಂತ್ರ್ಯ ಸೇನಾನಿಯಾದ ಮುಖ್ಯ ಶಿಕ್ಷಕಿ

ಶ್ರೀ ನಾರಾಯಣ ಗುರು, ಮಹಾತ್ಮ ಗಾಂಧಿ ಹಾಗೂ ಇ ವಿ ರಾಮಸ್ವಾಮಿ ನಾಯ್ಕರ್ ರಂತಹ ಮಹಾನ್ ನಾಯಕರು ಭಾಗವಹಿಸಿದ ಅಭೂತಪೂರ್ವ ಅಭಿಯಾನವಿದು. 1864 ರಲ್ಲಿ ತಿರುವಿಥಂಕೂರಿನ ಎಲ್ಲಾ ರಸ್ತೆಗಳು ಯಾವುದೇ ಸಾರ್ವಜನಿಕರಿಗೆ ಮುಕ್ತವಾಗಿದ್ದವು. ಆದರೆ 6 ದಶಕ ಕಳೆದರೂ ಕೋಟ್ಯಂ ಬಳಿಯ ವೈಕಂನ ರಸ್ತೆಗಳಿಗೆ ಕೆಳ ಜಾತಿಯವರಿಗೆ ಅವಕಾಶ ಇರಲಿಲ್ಲ. ಈ ತಾರತಮ್ಯದ ವಿರುದ್ಧ ಕಾಂಗ್ರೆಸ್ ನಾಯಕ ಟಿ ಕೆ ಮಾಧವನ್ ಹೋರಾಟಕ್ಕಿಳಿಯುತ್ತಾರೆ. ಒಮ್ಮೆ ಗಾಂಧಿಜಿಯವರನ್ನು ಭೇಟಿಯಾದಾಗ ಈ ರಸ್ತೆ ಸಮಸ್ಯೆ ಬಗ್ಗೆ ವಿವರಿಸಿದರು. ಆಗ ಗಾಂಧಿಜಿ ಹೋರಾಟಕ್ಕೆ ಬೆಂಬಲ ನೀಡಿದರು.