ನವಭಾರತ ನಿರ್ಮಾಣಕ್ಕೆ ನವಚೈತನ್ಯ ತುಂಬುತ್ತಿರುವ ಐಎಚ್‌ಎಕ್ಸ್‌ಗೆ ಆಜಾದಿ ಕಾ ಅಮೃತ್ ಮಹೋತ್ಸವ ಯಾತ್ರೆ
ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ತುಂಬಿದ ಈ ಸಂದರ್ಭದಲ್ಲಿ, ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಯಾತ್ರೆಯ ಒಂದು ಝಲಕ್ ಇಲ್ಲಿದೆ.
ಬೆಂಗಳೂರು (ಆ.24): ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷವಾಗಿರುವ ಸಂದರ್ಭವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿತ್ತು. ಎನ್‌ಸಿಸಿ ವಿದ್ಯಾರ್ಥಿಗಳೊಂದಿಗೆ ಜೊತೆಯಲ್ಲಿ ಸಾಗುತ್ತಿರುವ ಆಜಾದಿ ಕಿ ಅಮೃತ್ ಮಹೋತ್ಸವ ಯಾತ್ರೆ, ಈಗ ಸ್ಟಾರ್ಟ್ ಅಪ್ ಜಗತ್ತಿನಲ್ಲಿ ಗಮನಸೆಳೆಯುತ್ತಿರುವ ಐಎಚ್‌ಎಕ್ಸ್ ಕಂಪನಿಯ ಕಡೆಗೆ ಹೊರಟಿತ್ತು.
ತನ್ನ ಡಿಜಿಟಲ್ ಹೆಲ್ತಕೇರ್ ಹಾಗೂ ಡೇಟಾ ಫ್ಲಾಟ್ ಫಾರ್ಮ್ ಮೂಲಕ, ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಸೆಂಟರ್, ನರ್ಸಿಂಗ್ ಹೋಮ್, ಕ್ಲಿನಿಕ್ ಹಾಗೂ ಇನ್ಶುರೆನ್ಸ್ ಕಂಪನಿಗಳೊಂದಿಗೆ ಬೆರೆಯುತ್ತಿರುವ ಕಂಪನಿ ಐಎಚ್‌ಎಕ್ಸ್. ಆರೋಗ್ಯ ಕ್ಷೇತ್ರದ ಸೇವೆಗಳು ಹೆಚ್ಚು ಸರಳ ಮತ್ತು ಉಪಯುಕ್ತವಾಗುವ ರೀತಿಯಲ್ಲಿ ಈ ಕಂಪನಿ ಶ್ರಮಿಸುತ್ತಿದೆ.
ಅಂತಿಮ ಹಂತಕ್ಕೆ ಪ್ರವೇಶಿಸಿದ ಎಷ್ಯಾನೆಟ್ ನ್ಯೂಸ್ ನೆಟ್‌ವರ್ಕ್-ಎನ್‌ಸಿಸಿ ವಜ್ರ ಜಯಂತಿ ಯಾತ್ರೆ
ತಮ್ಮ ಡೇಟಾ ಫ್ಲಾಟ್ ಫಾರ್ಮ್ ಕುರಿತಾಗಿ ಮಾಹಿತಿ ನೀಡುವ ಮುನ್ನ, ಈ ಕಂಪನಿಯ ಉದ್ದೇಶವೇನು, ಆರೋಗ್ಯ ಕ್ಷೇತ್ರದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿವರಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳಿಗೆ ನೀಡಿದರು. 'ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಇನ್ನೂ ತೀರಾ ಕೆಳಮಟ್ಟದಲ್ಲಿದೆ. ಹೊಸ ಯುಗದ ತಂತ್ರಜ್ಞಾನಗಳ ಸೂಕ್ತ ಬಳಕೆ ಹಾಗೂ ಇಡೀ ಕ್ಷೇತ್ರವನ್ನು ಬದಲಾವಣೆ ಮಾಡುವ ಬಯಕೆಯೊಂದಿಗೆ ಐಎಚ್‌ಎಕ್ಸ್‌ಅನ್ನು ಆರಂಭ ಮಾಡಿದ್ದಾಗಿ' ಕಂಪನಿಯ ಸಿಇಒ ಮಹೇಶ್ ನಾಗರಾಜ್ ಹೇಳಿದರು.