Asianet Suvarna News Asianet Suvarna News

ಅಂತಿಮ ಹಂತಕ್ಕೆ ಪ್ರವೇಶಿಸಿದ ಎಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌-ಎನ್‌ಸಿಸಿ ವಜ್ರ ಜಯಂತಿ ಯಾತ್ರೆ

ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್-ಎನ್‌ಸಿಸಿ ವಜ್ರ ಜಯಂತಿ ಯಾತ್ರೆಯು ನವದೆಹಲಿಯ ರಾಜ್ ಘಾಟ್‌ನಿಂದ ಅಂತಿಮ ಹಂತವನ್ನು ಪ್ರವೇಶಿಸಿದೆ. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಹೆಮ್ಮೆಪಡುತ್ತದೆ. ಯಾತ್ರೆಯು ಕಳೆದ 75 ವರ್ಷಗಳಲ್ಲಿ ನಮ್ಮ ರಾಷ್ಟ್ರದ ಮಹತ್ತರವಾದ ಸಾಧನೆಗಳನ್ನು ಪ್ರತಿಬಿಂಬಿಸಿದ್ದು ಮಾತ್ರವಲ್ಲದೆ, ದೇಶ ಸ್ವಾತಂತ್ರ್ಯ ಪಡೆದ 100 ವರ್ಷವಾಗುವ ವೇಳೆಗೆ ನಮ್ಮ ದೇಶ ಯಾವ ಸ್ಥಾನದಲ್ಲಿರಬೇಕು ಎನ್ನುವ ಮಾರ್ಗಸೂಚಿಯನ್ನು ರೂಪಿಸಲು ಸಹಾಯ ಮಾಡಿತು.
 

Aug 8, 2022, 8:19 PM IST

ನವದೆಹಲಿ (ಆ.8): ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್-ಎನ್‌ಸಿಸಿ ವಜ್ರ ಜಯಂತಿ ಯಾತ್ರೆಯು ನ್ಯಾಷನಲ್‌ ಕೆಡೆಟ್ ಕಾರ್ಪ್ಸ್‌ನ 150 ಕೆಡೆಟ್‌ಗಳು ಒಳಗೊಂಡ ಪ್ರಯಾಣವು ರಾಷ್ಟ್ರದಾದ್ಯಂತ ಪ್ರಮುಖ ಐತಿಹಾಸಿಕ ತಾಣಗಳು, ರಕ್ಷಣಾ ಸಂಸ್ಥೆಗಳು ಮತ್ತು ಶ್ರೇಷ್ಠತೆಯ ಕೇಂದ್ರಗಳ ಮೂಲಕ ಪ್ರಯಾಣಿಸಿದ್ದು, ನವದೆಹಲಿಯಲ್ಲಿ ತನ್ನ ಅಂತಿಮ ಹಂತವನ್ನು ಪ್ರವೇಶಿಸಿತು. 

ಯುವಜನತೆಗೆ ಸಂಸ್ಕೃತಿ ಮತ್ತು ಪರಂಪರೆಯ ಸಂಪತ್ತನ್ನು ಪ್ರಸ್ತುತಪಡಿಸುವ ಗುರಿಯನ್ನು ಹೊಂದಿರುವ ವಜ್ರ ಜಯಂತಿ ಯಾತ್ರೆಯು ಕಳೆದ 75 ವರ್ಷಗಳಲ್ಲಿ ನಮ್ಮ ರಾಷ್ಟ್ರದ ಮಹತ್ತರವಾದ ಸಾಧನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು 100 ನೇ ವರ್ಷಕ್ಕೆ ಕಾಲಿಟ್ಟಾಗ ದೇಶ ಎಲ್ಲಿರಬೇಕು ಎಂಬ ಮಾರ್ಗಸೂಚಿಯನ್ನು ರೂಪಿಸಲು ಸಹಾಯ ಮಾಡಿತು. ರಕ್ಷಣಾ ಸಚಿವಾಲಯ ಮತ್ತು ನ್ಯಾಷನಲ್‌ ಕೆಡೆಟ್ ಕಾರ್ಪ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದೆ, ಜೂನ್ 14 ರಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಧ್ವಜಾರೋಹಣ ಮಾಡಿದರು. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜುಲೈ 20 ರಂದು ಎರಡನೇ ಚರಣದ ಧ್ವಜಾರೋಹಣ ಮಾಡಿದ್ದರು.

India@75 ಪ್ರತಿಷ್ಠಿತ ಕೇರಳ ಕಲಾಮಂಡಲಂ ತಲುಪಿದ ವಜ್ರ ಜಯಂತಿ ಯಾತ್ರೆ!

ಕಾರ್ಯಕ್ರಮದಲ್ಲಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಲ್ರಾ ಮತ್ತು ಎನ್‌ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್ಬೀರ್‌ಪಾಲ್ ಸಿಂಗ್ ಉಪಸ್ಥಿತರಿದ್ದರು.