ಮಕ್ಕಳಿಗೆ ಚುಚ್ಚುಮದ್ದು ಹಾಕಿಸ್ಲೇಬೇಕು ಅನ್ನೋದ್ಯಾಕೆ? ತಜ್ಞರು ಏನಂತಾರೆ ಕೇಳಿ
ಮಕ್ಕಳಿಗೆ ಚಿಕ್ಕಂದಿನಲ್ಲೇ ನಿರ್ಧಿಷ್ಟ ತಿಂಗಳು ಆಗುವಾಗ ಚುಚ್ಚುಮದ್ದು ಹಾಕಿಸಿಕೊಳ್ಳಬೇಕೆಂದು ವೈದ್ಯರು ಸೂಚಿಸುತ್ತಾರೆ. ಈ ಇಂಜೆಕ್ಷನ್‌ಗಳನ್ನು ಯಾಕೆ ಹಾಕಿಸಿಕೊಳ್ಳಬೇಕು. ಹಾಕಿಸಿಕೊಳ್ಳದಿದ್ದರೆ ಏನಾಗುತ್ತೆ ಅನ್ನೋ ಬಗ್ಗೆ ಮಕ್ಕಳ ತಜ್ಞರು ಮಾಹಿತಿ ನೀಡಿದ್ದಾರೆ.
ವ್ಯಾಕ್ಸಿನೇಶನ್ ಅನ್ನೋದು ಮಕ್ಕಳಿಗೆ ಕಾಯಿಲೆ ಬರದಂತಿರಲು ಕೊಡುವ ಚುಚ್ಚುಮದ್ದು. ಇಂಡಿಯನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಅನುಸಾರ ಮಕ್ಕಳಿಗೆ ಚುಚ್ಚುಮದ್ದು ಕೊಡಬಹುದು. ಈ ರೀತಿಯ ಲಸಿಕೆಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಮಕ್ಕಳು ಶಾಲೆಗೆ ಹೋಗುವಾಗ ಸುಲಭವಾಗಿ ಕಾಯಿಲೆ ಹರಡುತ್ತದೆ. ಕೆಲವೊಮ್ಮೆ ಇದು ಗಂಭೀರವಾಗಿ ಪರಿಣಮಿಸಬಹುದು. ಇಂಥಾ ಸಂದರ್ಭದಲ್ಲಿ ವ್ಯಾಕ್ಸಿನೇಷನ್ ಯಾವಾಗಲೂ ಮಕ್ಕಳ ಆರೋಗ್ಯವನ್ನು ರಕ್ಷಿಸುತ್ತದೆ ಎಂದು ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಹೇಳುತ್ತಾರೆ.