Asianet Suvarna News Asianet Suvarna News

Childrens Health: ಮಕ್ಕಳಿಗೆ ಪಿಜ್ಜಾ,ಬರ್ಗರ್ ಕೊಡ್ತೀರಾ, ಮಕ್ಕಳ ತಜ್ಞರು ಏನಂತಾರೆ?

ಜಂಕ್‌ಫುಡ್‌ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಮಕ್ಕಳು, ವೃದ್ಧರೆನ್ನದೆ ಎಲ್ಲಾ ವಯಸ್ಸಿನವರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಮುಖ್ಯವಾಗಿ ಮಕ್ಕಳು ಜಂಕ್‌ಫುಡ್ ತಿನ್ಲೇಬಾರ್ದು ಅಂತಾರೆ. ಯಾಕೆ?

ಮಕ್ಕಳ ಆರೋಗ್ಯ ಚೆನ್ನಾಗಿರಬೇಕಾದರೆ ಅವರಿಗೆ ನೀಡೋ ಆಹಾರದ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳಿಗೆ ತಿನ್ನಲು ಆರೋಗ್ಯಕರ ಆಹಾರವನ್ನು ಕೊಡಬೇಕು. ಆದರೆ ಬಹುತೇಕ ಹೆಚ್ಚಿನ ಮಕ್ಕಳು ಜಂಕ್‌ಫುಡ್‌ನ್ನು ಹೆಚ್ಚು ಇಷ್ಟಪಡುತ್ತಾರೆ. ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್ ಮೊದಲಾದವುಗಳನ್ನು ಹೆಚ್ಚು ತಿನ್ನುತ್ತಾರೆ. ಆದರೆ ಮಕ್ಕಳಿಗೆ ಜಂಕ್‌ ಫುಡ್ ಕೊಡೋದು ಒಳ್ಳೆಯದಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಜಂಕ್‌ಫುಡ್ ಕೊಡೋದಿದ್ರೂ ಅದರಲ್ಲಿ ಏನೆಲ್ಲಾ ಸೇರಿಸಲಾಗಿದೆ ಎಂಬುದನ್ನು ಮೊದಲೇ ಓದಿಕೊಳ್ಳಬೇಕು. ಮಕ್ಕಳಿಗೆ ಜಂಕ್‌ಫುಡ್ ಕೊಡುವ ಬಗ್ಗೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಮಾಹಿತಿ ನೀಡಿದ್ದಾರೆ.

Childrens Health: ಮಕ್ಕಳಿಗೆ ಚಿಕ್ಕಂದಿನಲ್ಲೇ ಮಾಂಸಾಹಾರ ಕೊಡಬಹುದಾ..ತಜ್ಞರು ಏನಂತಾರೆ?

Video Top Stories