Childrens Health: ಮಕ್ಕಳಿಗೆ ಚಿಕ್ಕಂದಿನಲ್ಲೇ ಮಾಂಸಾಹಾರ ಕೊಡಬಹುದಾ..ತಜ್ಞರು ಏನಂತಾರೆ?
ಮಕ್ಕಳು ಆರೋಗ್ಯಯುತವಾಗಿ ಬೆಳೆಯಲು ಅವರಿಗೆ ಯಾವ ರೀತಿಯ ಆಹಾರ ಕೊಡುತ್ತಿದ್ದೇವೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಹೀಗಾಗಿ ಮಕ್ಕಳ ಆರೋಗ್ಯಕ್ಕೆ ಸಸ್ಯಾಹಾರ ಅಥವಾ ಮಾಂಸಾಹಾರ ಯಾವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಆಹಾರ ಪದ್ಧತಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಸಸ್ಯಾಹಾರವನ್ನು ಇಷ್ಟಪಟ್ಟರೆ, ಇನ್ನು ಕೆಲವರು ಮಾಂಸಾಹಾರವನ್ನು ತಿನ್ನುತ್ತಾರೆ. ವೆಜಿಟೇರಿಯನ್ ಆಗಿದ್ರೂ ನಾನ್-ವೆಜಿಟೇರಿಯನ್ ಆಗಿದ್ದರೂ ನಿರ್ಧಿಷ್ಟ ಪ್ರಮಾಣದ ಪ್ರೊಟೀನ್, ವಿಟಮಿನ್‌ಗಳು ದೇಹಕ್ಕೆ ಲಭಿಸುತ್ತವೆ. ಇದು ದೊಡ್ಡವರ ವಿಷಯದಲ್ಲಾಯಿತು. ಆದರೆ ಮಕ್ಕಳ ಆರೋಗ್ಯಕ್ಕೆ ಯಾವ ರೀತಿಯ ಆಹಾರಕ್ರಮ ಉತ್ತಮ. ಪ್ರೊಟೀನ್, ಒಮೆಗಾ-3 ಮೊದಲಾದ ಅಂಶ ಇದೇ ಕಾರಣಕ್ಕೆ ಮಕ್ಕಳಿಗೆ ಮಾಂಸಾಹಾರ ಕೊಡೋದು ಸರೀನಾ ? ಈ ಬಗ್ಗೆ ಮಕ್ಕಳ ತಜ್ಞರಾದ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ.