Asianet Suvarna News Asianet Suvarna News

ಮಕ್ಕಳ ಆರೋಗ್ಯಕ್ಕೆ ಹಸಿ ಮೊಟ್ಟೆ ಅಥವಾ ಬೇಯಿಸಿದ ಮೊಟ್ಟೆ, ಯಾವುದು ಒಳ್ಳೇದು?

ಮಕ್ಕಳು ಆರೋಗ್ಯವಾಗಿರಬೇಕಾದರೆ ಅವರಿಗೆ ನೀಡೋ ಆಹಾರದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಬಹುತೇಕರು ಮಕ್ಕಳಿಗೆ ಹಸಿ ಮೊಟ್ಟೆ ಕೊಡೋದು ಆರೋಗ್ಯಕ್ಕೆ ತುಂಬಾ ಒಳ್ಳೇದು ಅಂದುಕೊಂಡಿದ್ದಾರೆ. ಆದ್ರೆ ಇದು ನಿಜಾನ, ಈ ಬಗ್ಗೆ ಮಕ್ಕಳ ತಜ್ಞರು ಏನಂತಾರೆ?

ಮೊಟ್ಟೆಯು ಎಲ್ಲಾ ವಯಸ್ಸಿನವರಿಗೆ ಸೂಪರ್ ಫುಡ್. ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಮೊಟ್ಟೆ ಹೊಂದಿರುತ್ತವೆ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ (Health) ಮೊಟ್ಟೆ ಸೇವನೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಕೆಲವರು ಮಕ್ಕಳಿಗೆ ಹಸಿ ಮೊಟ್ಟೆ (Raw egg)ಯನ್ನೂ, ಇನ್ನು ಕೆಲವರು ಬೇಯಿಸಿದ ಮೊಟ್ಟೆಯನ್ನೂ ಕೊಡುತ್ತಾರೆ. ಆದರೆ ಬೇಯಿಸದ ಮೊಟ್ಟೆಯಲ್ಲಿ ಬ್ಯಾಕ್ಟಿರೀಯಾಗಳಿರಬಹುದು. ಹೀಗಾಗಿ ಮಕ್ಕಳಿಗೆ ಬೇಯಿಸದ ಹಸಿ ಮೊಟ್ಟೆಯನ್ನು ಕೊಡಬೇಡಿ ಅಂತಾರೆ ತಜ್ಞರು. ಬದಲಿಗೆ ಮಕ್ಕಳಿಗೆ ಯಾವಾಗಲೂ ಮೊಟ್ಟೆಯನ್ನು ಬೇಯಿಸಿ ಕೊಡುವಂತೆ ಮಕ್ಕಳ ತಜ್ಞ (Childrens expert) ಡಾ.ಸಯ್ಯದ್ ಮುಜಾಹಿದ್ ಹುಸೇನ್ ಸಲಹೆ ನೀಡುತ್ತಾರೆ.

Healthy Food: ಮಕ್ಕಳಿಗೆ ಹಾಲಿನ ಜೊತೆ ಇವನ್ನ ನೀಡಿದ್ರೆ ಆಹಾರ ವಿಷವಾದೀತು ಜೋಕೆ

Video Top Stories