ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?
ಹೃದಯ ಅನ್ನೋದು ಮನುಷ್ಯನ ದೇಹದ ಅವಿಭಾಜ್ಯ ಅಂಗ. ಹೃದಯ ಬಡಿತ ನಿಂತರೆ ಜೀವ ನಿಂತು ಹೋಗುತ್ತೆ. ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗ್ತಿದೆ. ಆದ್ರೆ ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗ್ತಿದೆ. ವೃದ್ಧರು ಮಕ್ಕಳು ಅನ್ನೋ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಹಾರ್ಟ್‌ಅಟ್ಯಾಕ್‌ಗೆ ತುತ್ತಾಗುತ್ತಿದ್ದಾರೆ. ಆದರೆ ಹೀಗೆ ಹೃದಯಾಘಾತವಾದಾಗ ಎಲ್ಲರೂ ಗಾಬರಿಯಾಗಿಬಿಡುತ್ತಾರೆ. ತಕ್ಷಣಕ್ಕೇ ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಹೀಗೆ ಯಾರಿಗಾದರೂ ದಿಢೀರ್ ಹೃದಯಾಘಾತವಾದಾಗ ನಾವೇನು ಮಾಡಬಹುದು. ಕಾರ್ಡಿಯಾಕ್ ಸರ್ಜನ್ ರಾಜೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.