ಹಾರ್ಟ್ಅಟ್ಯಾಕ್ ಆಗೋ ಮೊದ್ಲೇ ಅಪಾಯದ ಬಗ್ಗೆ ತಿಳ್ಕೊಳ್ಳೋದು ಹೇಗೆ?
ಹಾರ್ಟ್‌ಅಟ್ಯಾಕ್ ಆಗುವ ಮೊದಲೇ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ. ಕೆಲವೊಬ್ಬರು ಹೃದಯಾಘಾತ ಆಗೋ ಮೊದಲು ಹೃದಯ ಎಡಗಡೆ ಇರೋ ಕಾರಣ ಅಲ್ಲೇ ನೋವು ಬರುತ್ತದೆ ಅನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ. ಆ ಬಗ್ಗೆ ಕಾರ್ಡಿಯಾಕ್ ಸರ್ಜನ್, ಡಾ.ರಾಜೇಶ್ ಟಿ.ಆರ್ ಮಾಹಿತಿ ನೀಡಿದ್ದಾರೆ.
ಹಾರ್ಟ್ ಅಟ್ಯಾಕ್ ಇತ್ತೀಚಿಗೆ ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಆರೋಗ್ಯ ಸಮಸ್ಯೆ.ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಡ್ಯಾನ್ಸ್ ಮಾಡುವಾಗ, ವಾಕಿಂಗ್ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ ಹಾರ್ಟ್ ಅಟ್ಯಾಕ್ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಆ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಹಾರ್ಟ್ ಅಟ್ಯಾಕ್ ಆಗೋ ಮೊದಲು ಹೃದಯ ಎಡಗಡೆ ಇರೋ ಕಾರಣ ಅಲ್ಲೇ ನೋವು ಬರುತ್ತದೆ ಅನ್ನುತ್ತಾರೆ. ಆದರೆ ಹೃದಯ ಎಡಗಡೆಯಿರೋದ್ರಿಂದ ಎಡಗಡೆ ಮಾತ್ರ ನೋವು ಬರಬೇಕು ಅಂತಿಲ್ಲ. ದೇಹದ (Body) ಯಾವ ಭಾಗದಲ್ಲಿ ಬೇಕಾದರೂ ನೋವು ಬರುತ್ತದೆ. ಬಲಗಡೆ, ಬೆನ್ನಿನಲ್ಲಿ ಸಹ ನೋವು ಕಾಣಿಸಿಕೊಳ್ಳುತ್ತದೆ ಎಂದು ಕಾರ್ಡಿಯಾಕ್ ಸರ್ಜನ್, ಡಾ.ರಾಜೇಶ್ ಟಿ.ಆರ್ ಮಾಹಿತಿ ನೀಡಿದ್ದಾರೆ.
ಹೃದಯಾಘಾತಕ್ಕೂ ಮೊದಲು ಚರ್ಮದಲ್ಲಿ ಹೀಗೆಲ್ಲಾ ಬದಲಾವಣೆಯಾಗುತ್ತೆ, ಗಮನಿಸ್ಕೊಳ್ಳಿ