Asianet Suvarna News Asianet Suvarna News

ಮಕ್ಕಳ ಗಂಟಲಲ್ಲಿ ಊಟ ಸಿಕ್ಕಾಕ್ಕೊಂಡ್ರೆ ಏನ್ ಮಾಡ್ಬೇಕು?

ಮಕ್ಕಳ ಲಾಲನೆ-ಪಾಲನೆ ತುಂಬಾ ಕಷ್ಟವಾದ ಕೆಲಸ. ಮಕ್ಕಳ ಆಹಾರ, ಆರೋಗ್ಯ ಎಲ್ಲದರ ಬಗ್ಗೆಯೂ ಗಮನ ಹರಿಸಬೇಕು. ಅದರಲ್ಲೂ ಮಕ್ಕಳಿಗೆ ಊಟ ಮಾಡಿಸುವಾಗ ಆಹಾರ ಗಂಟಲಲ್ಲಿ ಸಿಲುಕೋದು ಸಾಮಾನ್ಯ. ಹೀಗಾದಾಗ ಏನ್ ಮಾಡ್ಬೇಕು?

ಮಕ್ಕಳು ಆರೋಗ್ಯವಾಗಿರಬೇಕಾದರೆ ಸರಿಯಾದ ಆಹಾರ ಕೊಡಬೇಕು. ಆದ್ರೆ ಆಹಾರ ಕೊಡುವಾಗ ಹಲವು ಬಾರಿ ಮಕ್ಕಳ ಗಂಟಲಲ್ಲಿ ಸಿಲುಕಿ ಹಾಕಿಕೊಳ್ಳುತ್ತದೆ. ಹೀಗಾದಾಗ ಪೋಷಕರು ಗಾಬರಿಯಾಗುತ್ತಾರೆ. ಹೆಚ್ಚಿನ ಪೋಷಕರು ಮಕ್ಕಳನ್ನು ಮೇಲೆ ನೋಡು ಮೇಲೆ ನೋಡು ಎಂದು ಹೇಳಿ ಸರಿ ಮಾಡಲು ಮುಂದಾಗುತ್ತಾರೆ. ಕೆಲವೊಮ್ಮೆ ಈ ರೀತಿ ಮಾಡುವುದರಿಂದ ಸಮಸ್ಯೆ ಬಗೆಹರಿಯುತ್ತದೆ. ಆದರೆ ಇನ್ನು ಕೆಲವೊಮ್ಮೆ ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ಹಾಗಿದ್ರೆ ಮಕ್ಕಳ ಗಂಟಲಲ್ಲಿ ಆಹಾರ ಸಿಲುಕಿದ್ರೆ ಏನ್ ಮಾಡ್ಬೇಕು? ಮಕ್ಕಳ ತಜ್ಞರಾದ ಸಯ್ಯದ್ ಮುಜಾಹಿದ್ ಹುಸೇನ್ ಮಾಹಿತಿ ನೀಡಿದ್ದಾರೆ.

Childrens Health: ಮಕ್ಕಳಿಗೆ ಪಿಜ್ಜಾ,ಬರ್ಗರ್ ಕೊಡ್ತೀರಾ, ಮಕ್ಕಳ ತಜ್ಞರು ಏನಂತಾರೆ?

Video Top Stories