Asianet Suvarna News Asianet Suvarna News

ಮಕ್ಕಳನ್ನು ಕಾಡೋ ಅಸ್ತಮಾಕ್ಕೆ ಪರಿಹಾರವೇನು..ತಜ್ಞರು ಏನಂತಾರೆ?

ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದುದು ಅಗತ್ಯ. ಅದರಲ್ಲೂ ಕೆಲವು ಮಕ್ಕಳಿಗೆ ಚಿಕ್ಕಂದಿನಲ್ಲೇ ಅಸ್ತಮಾ ಸಮಸ್ಯೆ ಕಾಡುತ್ತಿರುತ್ತದೆ. ಇದಕ್ಕೇನು ಪರಿಹಾರ?

ಅಸ್ತಮಾ ಹಲವರನ್ನು ಕಾಡುವ ಸಮಸ್ಯೆ. ಅದರಲ್ಲೂ ಉಸಿರಾಡಲು ಕಷ್ಟಪಡುವ ಈ ಸಮಸ್ಯೆ ಕೆಲ ಮಕ್ಕಳನ್ನು ಸಹ ಕಾಡುತ್ತದೆ. ಪುಟ್ಟ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಂಡಾಗ ಸಹಜವಾಗಿಯೇ ಪೋಷಕರು ಗಾಬರಿಯಾಗುತ್ತಾರೆ. ಆದರೆ ಹೀಗೆ ಗಾಬರಿ ಪಡುವ ಅಗತ್ಯವಿಲ್ಲ. ಅಸ್ತಮಾ ಒಂದು ಅಲರ್ಜಿ, ಕಾಯಿಲೆ ಅಲ್ಲ. ಮಕ್ಕಳಿಗೆ ಅಸ್ತಮಾವಿದ್ದಾಗ ಇನ್‌ಹೇಲರ್ ಬಳಕೆ ಮಾಡಿ ಆರೋಗ್ಯವಾಗಿರಬಹುದು ಅಂತಾರೆ ತಜ್ಞರು. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್‌ ನೀಡಿದ್ದಾರೆ.

Childrens Health: ಮಕ್ಕಳು ಏನ್ ಕೊಟ್ರೂ ತಿನ್ನೋದಿಲ್ಲ, ಇದಕ್ಕೇನು ಪರಿಹಾರ?