ಹೃದಯಾಘಾತವಾದಾಗ ಸಿಪಿಆರ್ ನೀಡಿದರೆ ವ್ಯಕ್ತಿಯನ್ನು ಬದುಕಿಸಬಹುದಾ?
ಹೃದಯ ಸ್ತಂಭನಕ್ಕೆ ಯಾರಾದರೂ ಒಳಗಾದಾಗ ಅವರ ಎದೆ ಒತ್ತುವುದು, ಬಾಯಿಗೆ ಉಸಿರಾಟ ನೀಡುವಂತಹ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸಾಮಾನ್ಯ. ಹೃದಯಾಘಾತವಾದಾಗ ಸಿಪಿಆರ್ ನೀಡುವುದು ಸರಿಯೇ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೃದಯ ಯಾವುದೇ ಕಾರಣಕ್ಕೆ ನಿಂತು ಹೋಗಿಬಿಟ್ಟರೆ ದೇಹಕ್ಕೆ ರಕ್ತ ಸಂಚಾರ ಇರುವುದಿಲ್ಲ. ಮೆದುಳಿಗೂ ರಕ್ತ ಸಂಚಾರ ಪೂರೈಕೆಯಾಗುವುದಿಲ್ಲ. ಇಂಥಾ ಸಂದರ್ಭದಲ್ಲಿ ಆರ್ಟಿಫಿಶಿಯಲ್ ಆಗಿ ಚೆಸ್ಟ್ ಕಂಪ್ರೆಶನ್ ಮಾಡಿ ಹೃದಯ ಪಂಪ್ ಮಾಡುವ ತರ ಮಾಡಬಹುದು. ನಾವು ಹೊರಗಿನಿಂದ ಪ್ರೆಸ್ ಮಾಡಿದಾಗ ಹಾರ್ಟ್ ಪಂಪ್ ಆಗಿ ಬ್ಲಡ್ ಇಜೆಕ್ಟ್ ಆಗುತ್ತೆ, ಫಿಲ್ ಆಗುತ್ತೆ ಇದನ್ನು ಸಿಪಿಆರ್ ಎನ್ನುತ್ತಾರೆ. ಆದ್ರೆ ಹೃದಯಾಘಾತ ಆದವರಿಗೆಲ್ಲಾ ಸಿಪಿಆರ್ ಬೇಕಾಗಿಲ್ಲ. ಮತ್ತೆ ಯಾರಿಗೆಲ್ಲಾ ಮಾಡಬಹುದು? ಹೃದಯಾಘಾತವಾದಾಗ ಸಿಪಿಆರ್ ನೀಡೋದ್ರಿಂದ ವ್ಯಕ್ತಿಯನ್ನು ಬದುಕಿಸಬಹುದಾ? ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ನೀಡಿದ್ದಾರೆ.