ಹೆಚ್ಚು ಸ್ವೀಟ್ಸ್ ತಿನ್ನೋದ್ರಿಂದ ಹಾರ್ಟ್‌ಅಟ್ಯಾಕ್ ಆಗುತ್ತಾ?
ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿ, ವ್ಯಾಯಾಮ ಮಾಡದಿರುವ ದಿನಚರಿ ಹೃದಯಾಘಾತಕ್ಕೆ ಕಾರಣವಾಗುತ್ತೆ ಅಂತಾರೆ. ಆದರೆ ಸ್ವೀಟ್ಸ್ ತಿನ್ನೋದ್ರಿಂದ ಹೃದಯಾಘಾತವಾಗುತ್ತೆ ಅನ್ನೋದು ಎಷ್ಟು ನಿಜ. ಈ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.
ಹೃದಯಾಘಾತ ಇತ್ತೀಚಿನ ವರ್ಷಗಳಲ್ಲಿ ಸಾವಿಗೆ ಮುಖ್ಯ ಕಾರಣಗಳಲ್ಲಿ ಒಂದಾಗಿ ಬದಲಾಗಿದೆ. ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರೂ ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿ, ವ್ಯಾಯಾಮ ಮಾಡದಿರುವ ದಿನಚರಿ ಹೃದಯಾಘಾತಕ್ಕೆ ಕಾರಣವಾಗುತ್ತೆ ಅಂತಾರೆ. ಆದರೆ ಸ್ವೀಟ್ಸ್ ತಿನ್ನೋದ್ರಿಂದ ಹೃದಯಾಘಾತವಾಗುತ್ತೆ ಅನ್ನೋದು ಎಷ್ಟು ನಿಜ. ಈ ಬಗ್ಗೆ ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಮಾಹಿತಿ ನೀಡಿದ್ದಾರೆ. ಹೆಚ್ಚು ಸ್ವೀಟ್ಸ್ ತಿನ್ನೋದ್ರಿಂದ ಬೊಜ್ಜುತನ ಬರುತ್ತೆ. ಬೊಜ್ಜುತನದಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಅದು ರಕ್ತನಾಳಗಳಲ್ಲಿ ಜಮಾ ಆಗಿ ಬ್ಲಾಕ್ಸ್ ಆಗಿ ತೊಂದರೆಯಾಗುತ್ತದೆ. ಹೀಗಾಗಿ ಸ್ವೀಟ್ಸ್‌ನಿಂದ ಇನ್‌ಡೈರೆಕ್ಟ್ ಆಗಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.