Asianet Suvarna News Asianet Suvarna News

ಬೊಜ್ಜಿನಿಂದಾಗಿ ಉಂಟಾಗೋ ಆರೋಗ್ಯ ಸಮಸ್ಯೆಗಳೇನು?

ಬದಲಾಗುತ್ತಿರುವ ಲೈಫ್ ಸ್ಟೈಲ್‌ನಿಂದ ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಬೊಜ್ಜಿನ ಸಮಸ್ಯೆ ಹೆಚ್ಚಾಗ್ತಿದೆ. ಒಬೆಸಿಟಿಯಿಂದ ಆಗೋ ಸಮಸ್ಯೆಗಳೇನು. ಈ ಬಗ್ಗೆ ಡಾ.ಮಹಾಂತೇಶ್‌ ಚರಂತಿಮಠ ಮಾಹಿತಿ ನೀಡಿದ್ದಾರೆ.
 

ಬದಲಾಗುತ್ತಿರುವ ಲೈಫ್ ಸ್ಟೈಲ್‌ನಿಂದ ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಬೊಜ್ಜಿನ ಸಮಸ್ಯೆ ಹೆಚ್ಚಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಮನೆಯಲ್ಲಿ ಮಾಡಿದ ಅಡುಗೆಯನ್ನು ತಿನ್ನುವ ರೂಢಿಯೇ ಬಿಟ್ಟು ಹೋಗಿದೆ. ಯಾವಾಗ ನೋಡಿದ್ರೂ ಮೈದಾ, ಜಂಕ್ ಫುಡ್ ಮತ್ತು ಪ್ಯಾಕ್ ಮಾಡಿದ ಫುಡ್ ಸಾಕಷ್ಟು ತಿನ್ನುತ್ತಿದ್ದಾರೆ. ಇದರಿಂದಾಗಿ ಬೊಜ್ಜು ಸಹ ಹೆಚ್ಚುತ್ತಿದೆ. ಬೊಜ್ಜು ಹೆಚ್ಚಳದಿಂದ ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಸಣ್ಣ ವಯಸ್ಸಿನಲ್ಲಿಯೇ ಉಸಿರಾಟ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಸ್ಲೀಪ್ ಅಪ್ನಿಯಾ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ  ಡಾ. ಮಹಾಂತೇಶ್‌ ಚರಂತಿಮಠ ಮಾಹಿತಿ ನೀಡಿದ್ದಾರೆ.

ಹೆಚ್ಚು ಸಿಹಿ ತಿನ್ನೋದು ಮಧುಮೇಹಕ್ಕೆ ಕಾರಣವಾಗುತ್ತಾ?