ಹೆಚ್ಚು ಸಿಹಿ ತಿನ್ನೋದು ಮಧುಮೇಹಕ್ಕೆ ಕಾರಣವಾಗುತ್ತಾ?
ಇಂದಿನ ಯುಗದಲ್ಲಿ, ಮಧುಮೇಹ ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲಾ ವಯಸ್ಸಿನ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ ಅನ್ನೋದೆ ಶಾಕಿಂಗ್ ವಿಷಯವಾಗಿದೆ. ಮಧುಮೇಹದಲ್ಲಿ, ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಾಗುತ್ತೆ , ಇದರಿಂದಾಗಿ ದೇಹದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತೆ. ಇಲ್ಲಿಯವರೆಗೆ ನೀವು ಅನೇಕ ಬಾರಿ ಕೇಳಿರಬಹುದು, ಹೆಚ್ಚು ಸಕ್ಕರೆ ತಿನ್ನೋದು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಎಲ್ಲರೂ ಹೇಳೋದು. ಸಿಹಿ ತಿನ್ನುವುದು ನಿಜವಾಗಿಯೂ ಈ ಕಾಯಿಲೆಗೆ ಕಾರಣವಾಗುತ್ತಾ? ಸ್ವೀಟ್ ನಮ್ಮ ದೇಹಕ್ಕೆ ಹೇಗೆ ಹಾನಿಕಾರಕವಾಗಬಹುದು?
ಸಿಹಿ ತಿನ್ನೋದು ಮಧುಮೇಹಕ್ಕೆ ಕಾರಣವಾಗುತ್ತಾ?
ತಜ್ಞರ ಪ್ರಕಾರ, ಹೆಚ್ಚು ಸಕ್ಕರೆ ತಿನ್ನೋದರಿಂದ ಮಧುಮೇಹದ (diabetes) ಅಪಾಯ ಹೆಚ್ಚಾಗುತ್ತೆ, ಆದರೆ ಇದು ಮಧುಮೇಹದೊಂದಿಗೆ ನೇರ ಸಂಬಂಧ ಹೊಂದಿಲ್ಲ. ನೀವು ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ, ತೂಕವು ಹೆಚ್ಚಾಗುತ್ತೆ, ಇದು ಮಧುಮೇಹ ಬರುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ ಎಂದು ತಜ್ಞರು ಹೇಳುತ್ತಾರೆ.
ಸ್ವೀಟ್ನೆಸ್ ಕಾರಣದಿಂದಾಗಿ, ಹೆಚ್ಚಿನ ಜನರು ಸೆಂಟ್ರಿಪೇಟಲ್ ಒಬೆಸಿಟಿ ಹೊಂದುತ್ತಿದ್ದಾರೆ, ಅಂದರೆ ಹೊಟ್ಟೆಯ ಸುತ್ತಲೂ ಕೊಬ್ಬು (fat) ಶೇಖರಣೆಯಾಗುತ್ತೆ. ಇದನ್ನು ಮಧುಮೇಹಕ್ಕೆ ಕಾರಣವಾಗುವ ಒಂದು ಅಂಶವೆಂದು ಪರಿಗಣಿಸಲಾಗುತ್ತೆ. ಹಾಗಾಗಿ ಸಿಹಿ ಆಹಾರ ಸೇವಿಸೋದರಿಂದ ಮಾತ್ರ ಮಧುಮೇಹ ಬರುತ್ತೆ ಎಂದು ಹೇಳಲಾಗದು.
ದ್ರವ ರೂಪದ ಸಕ್ಕರೆ ಹೆಚ್ಚು ಅಪಾಯಕಾರಿ
ಮಧುಮೇಹ ತಜ್ಞರು ಹೇಳುವಂತೆ, ಸಿಹಿಯನ್ನು ಘನರೂಪದಲ್ಲಿ ಸೇವಿಸಿದರೆ, ಅದು ದೇಹಕ್ಕೆ ಕಡಿಮೆ ಹಾನಿಯನ್ನುಂಟು ಮಾಡುತ್ತೆ. ಸಕ್ಕರೆಯನ್ನು ದ್ರವರೂಪದಲ್ಲಿ (liquid sugar) ಸೇವಿಸೋದು ಹೆಚ್ಚು ಅಪಾಯಕಾರಿ. ಆದುದರಿಂದ ಯಾವುದೇ ಕಾರಣಕ್ಕೂ, ನೀವು ಸೇವಿಸುವ ಆಹಾರದಲ್ಲಿ, ಪಾನೀಯಗಳಲ್ಲಿ ಹೆಚ್ಚು ಸಕ್ಕರೆ ಸೇರಿಸಬೇಡಿ.
ಸಾಮಾನ್ಯವಾಗಿ, ತಂಪು ಪಾನೀಯಗಳು, ಸ್ಪೋರ್ಟ್ಸ್ ಡ್ರಿಂಕ್ಸ್ ಮತ್ತು ಎನರ್ಜಿ ಡ್ರಿಂಕ್ಸ್ ಸೇರಿದಂತೆ ಹೆಚ್ಚಿನ ತಂಪು ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ, ಇದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ತಂಪು ಪಾನೀಯಗಳನ್ನು ಸೇವಿಸೋದು ಅತ್ಯಂತ ಅಪಾಯಕಾರಿ. ಅಧಿಕ ಫ್ರಕ್ಟೋಸ್ ಸಿರಪ್ ಮತ್ತು ಕೃತಕ ಸಿಹಿಕಾರಕದ ಅತಿಯಾದ ಸೇವನೆಯು ಮಧುಮೇಹ ಉಂಟು ಮಾಡುವ ಸಾಧ್ಯತೆ ಇದೆ.
ಮಧುಮೇಹ ರೋಗಿಗಳು ಸಿಹಿತಿಂಡಿಗಳಿಂದ ದೂರವಿರಬೇಕು
ವೈದ್ಯರ ಪ್ರಕಾರ, ಮಧುಮೇಹ ರೋಗಿಗಳು ಯಾವುದೇ ರೂಪದಲ್ಲಿ ಸಿಹಿ ತಿನ್ನಬಾರದು. ಇದನ್ನು ಮಾಡೋದರಿಂದ, ಅವರ ಸಕ್ಕರೆ ಮಟ್ಟವು ಹೆಚ್ಚಾಗಬಹುದು ಮತ್ತು ಅಪಾಯ ಸಂಭವಿಸಬಹುದು. ಅವರು ಸಿಹಿ ಚಹಾ ಕುಡಿಯೋದನ್ನು ಸಹ ತಪ್ಪಿಸಬೇಕು.
ತಜ್ಞರು ಹೆಚ್ಚಿನ ಪ್ರಮಾಣದ ಸಕ್ಕರೆ ಸೇವಿಸೋದರಿಂದ ಹೃದ್ರೋಗ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ (blood pressure) ಸಮಸ್ಯೆಗಳು ಉಂಟಾಗಬಹುದು ಎಂದು ಹೇಳುತ್ತಾರೆ. ಆದ್ದರಿಂದ, ಪ್ರತಿಯೊಬ್ಬರೂ ಒಂದು ಮಿತಿಯಲ್ಲಿ ಸಿಹಿಯನ್ನು ಸೇವಿಸಬೇಕು. ಸಿಹಿ ತಿಂದ ನಂತರ ನೀರನ್ನು ಕುಡಿಯದಿದ್ದರೆ, ಅದು ರಕ್ತದಲ್ಲಿನ ಸಕ್ಕರೆಯ ಮಟ್ಟದ (Sugar Level) ಮೇಲೆ ಪರಿಣಾಮ ಬೀರೋದಿಲ್ಲ ಎಂದು ಅನೇಕ ಜನರು ನಂಬುತ್ತಾರೆ. ತಜ್ಞರು ಇದನ್ನು ಸಂಪೂರ್ಣ ಸುಳ್ಳು ಎಂದು ಹೇಳುತ್ತಾರೆ.
ಬೆಲ್ಲ ಬೆಸ್ಟ್
ನೀವು ಸಿಹಿ ತಿನ್ನಬಹುದು, ಆದರೆ ಸಕ್ಕರೆ ಬದಲಾಗಿ ನೀವು ಬೆಲ್ಲವನ್ನು ಸೇವಿಸೋದು ಉತ್ತಮ. ಬೆಲ್ಲ ಹೆಚ್ಚು ಪರಿಣಾಮ ಬೀರೋದಿಲ್ಲ, ಆದುದರಿಂದ ಸಾಧ್ಯವಾದಷ್ಟು ಸಕ್ಕರೆ ಬದಲು ಬೆಲ್ಲ ಸೇವಿಸಿ. ಉತ್ತಮ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಸಿಹಿಯನ್ನು ಕಂಟ್ರೋಲ್ ಮಾಡೋದು ಉತ್ತಮ. ಎಲ್ಲಾದಕ್ಕೂ ತಜ್ಞರ ಸಲಹೆ ಪಡೆಯೋದು ಉತ್ತಮ.