ವರ್ಕ್ ಫ್ರಮ್ ಹೋಮ್ ಇದ್ದವರು ಫಿಸಿಕಲ್ ಆಕ್ಟಿವಿಟಿ ಮಾಡ್ಲೇಬೇಕಾ?
ಕೊರೋನಾ ತೀವ್ರವಾಗಿ ಹರಡುತ್ತಿದ್ದ ಸಮಯದಲ್ಲಿ ಬಹುತೇಕ ಕಂಪೆನಿಗಳು ವರ್ಕ್ ಫ್ರಂ ಹೋಮ್ ಆಪ್ಶನ್ ನೀಡಿದ್ದವು. ಇವತ್ತಿಗೂ ಹಲವು ಕಂಪೆನಿಗಳು ಇದೇ ಪದ್ಧತಿಯನ್ನು ಮುಂದುವರಿಸಿವೆ. ಆದ್ರೆ ಮನೆಯಿಂದಲೇ ಕೆಲಸ ಮಾಡುವವರ ಆರೋಗ್ಯ ಚೆನ್ನಾಗಿರಬೇಕಾದರೆ ಫಿಸಿಕಲ್ ಆಕ್ಟಿವಿಟಿ ಮಾಡಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೊರೋನಾ ಕಾಲಘಟ್ಟದಲ್ಲಿ ಆರಂಭವಾಗಿರುವ ವರ್ಕ್ ಫ್ರಂ ಹೋಮ್ ಪದ್ಧತಿ ಸಾಕಷ್ಟು ಆರಾಮದಾಯಕವಾಗಿದೆ. ಆರಾಮವಾಗಿ ತಿನ್ನುವುದು ಮತ್ತು ಕುಡಿಯುವುದು ಮತ್ತು ಆಗಾಗ ರೆಸ್ಟ್ ಮಾಡೋ ಚಾನ್ಸ್ ಕೂಡ ಸಿಗುತ್ತೆ. ಆದರೆ ಕೆಲವೊಮ್ಮೆ ವರ್ಕ್ ಫ್ರಂ ಹೋಮ್‌ನಲ್ಲಿ ಕುಳಿತುಕೊಳ್ಳುವ ಜಾಗ, ಕುಳಿತುಕೊಳ್ಳುವ ರೀತಿ ಸರಿಯಾಗಿಲ್ಲದಿದ್ದರೆ ಆರೋಗ್ಯ ಸಮಸ್ಯೆ ಕಾಡಬಹುದು. ಮನೆಯಿಂದ ಕೆಲಸ ಮಾಡುವವರು ಕುಳಿತು ಕೆಲಸ ಮಾಡಲು ಸರಿಯಾದ ಸ್ಥಳ ಹೊಂದಿರುವುದಿಲ್ಲ. ಅವರು ಸಾಧ್ಯವಿರುವ ಎಲ್ಲಿಂದಲಾದರೂ ಕೆಲಸ ಮಾಡುತ್ತಾರೆ. ಹಾಸಿಗೆ, ಮಂಚ ಅಥವಾ ಯಾವುದೇ ಇತರ ಸ್ಥಳವಾಗಿರಬಹುದು. ಇದು ಅಂತಿಮವಾಗಿ ಕೆಟ್ಟ ಭಂಗಿಗೆ ಕಾರಣವಾಗಬಹುದು. ಹೀಗಾಗಿ ವರ್ಕ್ ಫ್ರಮ್ ಹೋಮ್ ಇದ್ದವರು ಫಿಸಿಕಲ್ ಆಕ್ಟಿವಿಟಿ ಮಾಡಲೇಬೇಕು ಎಂದು ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಕ್ಕಳು ಆರೋಗ್ಯವಾಗಿರಬೇಕಾದ್ರೆ ಎಕ್ಸರ್‌ಸೈಸ್ ಮಾಡ್ಲೇಬೇಕಾ..ತಜ್ಞರು ಏನಂತಾರೆ?