Summer Health Tips: ಮಕ್ಕಳಿಗೆ ಬೇಸಿಗೆ ಜ್ವರ ಬಂದ್ರೆ ಏನು ಮಾಡಬೇಕು?
ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಎಲ್ಲಾ ಕಾಲದಲ್ಲೂ ಅವರ ಚಟುವಟಿಕೆಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಮಕ್ಕಳು ಬೇಗನೇ ಹುಷಾರು ತಪ್ಪುತ್ತಾರೆ. ಬೇಸಿಗೆ ಜ್ವರ ಅವರನ್ನು ಕಾಡುತ್ತದೆ. ಇಂಥಾ ಸಂದರ್ಭದಲ್ಲಿ ಏನು ಮಾಡಬೇಕು?
ಬೇಸಿಗೆ ಬಂತೂಂದ್ರೆ ಸಾಕು ಸಾಲು ಸಾಲು ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ. ಹಿರಿಯರಾದರೆ ಬಿಸಿಲಲ್ಲಿ ಓಡಾಡದೆ ಮನೆಯಲ್ಲೇ ಇದ್ದು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಮಕ್ಕಳು ಬಿಸಿಲಲ್ಲಿ ಹೆಚ್ಚು ಓಡಾಡಿ ಆಟವಾಡುವ ಕಾರಣ ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅದರಲ್ಲೂ ಮಕ್ಕಳಿಗೆ ಬೇಸಿಗೆ ಜ್ವರ ಹೆಚ್ಚಾಗಿ ಕಾಡುತ್ತದೆ. ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಬೇಸಿಗೆಯಲ್ಲಿ ಆರೋಗ್ಯ ಹದಗೆಟ್ಟರೂ ಗುಣಮುಖರಾಗಲು ಸಮಯ ತೆಗೆದುಕೊಳ್ಳುತ್ತದೆ. ಬೇಸಿಗೆ ಜ್ವರ ಎಂದರೇನು, ಮಕ್ಕಳಿಗೆ ಬೇಸಿಗೆ ಜ್ವರ ಬಂದರೆ ಏನು ಮಾಡಬೇಕು? ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.