Summer Health: ಬೇಸಿಗೆಯಲ್ಲಿ ಎರಡು ಹೊತ್ತು ಸ್ನಾನ ಮಾಡ್ಲೇಬೇಕಾ?
ಸ್ನಾನ ಮಾಡುವುದು ಅಂದ್ರೆ ಹಲವರ ಬಾರಿಗೆ ಸೋಮಾರಿತನ. ಸುಮ್ಮನೆ ನೆಪವೊಡ್ಡಿ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಹೀಗೆ ಮಾಡಬಾರದು. ಈ ಬಗ್ಗೆ ತಜ್ಞ ವೈದ್ಯರು ಮಾತನಾಡಿದ್ದಾರೆ.
ದೇಹ ಕೊಳೆಯಿಲ್ಲದೆ ಕ್ಲೀನಾಗಿರೋಕೆ ಸ್ನಾನ ಮಾಡುವುದು ಅತೀ ಅವಶ್ಯಕ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ಬೆವರುವ ಕಾರಣ ಸಮಯಕ್ಕೆ ಸರಿಯಾಗಿ ಸ್ನಾನ ಮಾಡಲೇಬೇಕು. ಬೇಸಿಗೆಯಲ್ಲಿ ಹೆಚ್ಚು ಬೆವರುತ್ತದೆ, ಹೆಚ್ಚು ಕೊಳೆ ದೇಹಕ್ಕೆ ಅಂಟಿಕೊಳ್ಳುತ್ತದೆ. ಹೀಗಾಗಿ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಬೆವರು ಸಾಲೆ, ಅಲರ್ಜಿ ಮೊದಲಾದ ಸಮಸ್ಯೆಗಳು ಕಾಡಬಹುದು. ಹಾಗಿದ್ರೆ ಬೇಸಿಗೆಯಲ್ಲಿ ಎರಡು ಹೊತ್ತು ಸ್ನಾನ ಮಾಡ್ಬೇಕಾ? ಈ ಬಗ್ಗೆ ತಜ್ಞ ವೈದ್ಯ ಡಾ.ಸಾಯಿಕಿರಣ್ ಏನ್ ಹೇಳ್ತಾರೆ ತಿಳಿಯೋಣ.