ಚೀನಾದಲ್ಲಿ ಇನ್‌ಫ್ಲುಯೆನ್ಜಾ, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಪೂರ್ವಸಿದ್ಧತೆ
ಚೀನಾದಲ್ಲಿ ಮಕ್ಕಳ ಮೇಲೆ ಇನ್‌ಫ್ಲುಯೆನ್ಜಾ ತೀವ್ರ ಪರಿಣಾಮ ಬೀರುತ್ತಿರುವ ಕಾರಣ ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮವಾಗಿ ಎಚ್ಚರ ವಹಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗಾಗಿ, ವಯೋವೃದ್ದರಿಗಾಗಿ ವಿಶೇಷ ವಾರ್ಡ್ ಸಿದ್ದತೆ ಮಾಡಿಕೊಳ್ಳಲಾಗಿದೆ.
ವರ್ಷಗಳ ಹಿಂದೆ ಚೀನಾದ ವುಹಾನ್‌ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್ ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ಈ ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಇಲ್ಲಿನ ಮಕ್ಕಳಲ್ಲಿ ನ್ಯುಮೋನಿಯಾದ ಪ್ರಕರಣಗಳು ಕಂಡುಬರುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಚೀನಾದಲ್ಲಿ ಮಕ್ಕಳ ಮೇಲೆ ಇನ್‌ಫ್ಲುಯೆನ್ಜಾ ತೀವ್ರ ಪರಿಣಾಮ ಬೀರುತ್ತಿರುವ ಕಾರಣ ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮವಾಗಿ ಎಚ್ಚರ ವಹಿಸುವಂತೆ ಸೂಚಿಸಿದೆ.
ಇದರ ಬೆನ್ನಲ್ಲೇ, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗಾಗಿ, ವಯೋವೃದ್ದರಿಗಾಗಿ ವಿಶೇಷ ವಾರ್ಡ್ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಇನ್ನುಳಿದಂತೆ ಚಿಕಿತ್ಸೆಗೆ ಅಗತ್ಯವಾಗಿರೋ ಆಕ್ಸಿಜನ್ ಸೇರಿದಂತೆ ಎಲ್ಲವನ್ನ ಸಿದ್ಧತೆಯಲ್ಲಿರಿಸಲಾಗಿದೆ. ಮಾತ್ರವಲ್ಲ ಸುಸಜ್ಜಿತ ಕೊಠಡಿ, ವಿಶೇಷ ಬೆಡ್‌ಗಳು, ಮಕ್ಕಳ ಚಿಕಿತ್ಸೆಗಾಗಿಯೇ ಎನ್ಐಸಿಯು ವಾರ್ಡ್, ವೈದ್ಯರ ತಂಡ ಎಲ್ಲವೂ ಸಜ್ಜಾಗಿದೆ.
ಅಮೆರಿಕದಲ್ಲೂ ಚೀನಾ ಮಾದರಿಯಂತೆ ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆ, ಹೆಚ್ಚಿದ ಆತಂಕ