ಮಕ್ಕಳು ಹುಷಾರು ತಪ್ಪಿದಾಗ, ಸಾಮಾನ್ಯ ಜ್ವರವಲ್ಲ ಅಂತ ತಿಳ್ಕೊಳ್ಳೋದು ಹೇಗೆ?
ಮಳೆಗಾಲದಲ್ಲಿ ಮಕ್ಕಳನ್ನು ಕಾಡೋದು ಯಾವಾಗ್ಲೂ ಸಾಮಾನ್ಯ ಜ್ವರವೇ ಆಗಬೇಕೆಂದಿಲ್ಲ. ಡೆಂಗ್ಯೂ, ಚಿಕುನ್ ಗುನ್ಯಾ ಆಗಿದ್ದು ನೀವು ನಾರ್ಮಲ್ ಜ್ವರದ ಔಷಧಿ ಕೊಡುತ್ತಿದ್ದರೆ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡಬಹುದು. ಹಾಗಿದ್ರೆ, ಮಕ್ಕಳಿಗೆ ಬಂದಿರೋದು ಸಾಮಾನ್ಯ ಜ್ವರ ಅಲ್ಲಾಂತ ತಿಳ್ಕೊಳ್ಳೋದು ಹೇಗೆ?
ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಪೋಷಕರು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಮಳೆಯಲ್ಲಿ ನೆನೆದು ಆಟವಾಡಿ ಬರೋ ಕಾರಣ ಜ್ವರ, ಶೀತ, ಕೆಮ್ಮು ಮೊದಲಾದ ಸಮಸ್ಯೆಗಳು ಬೇಗನೇ ಕಾಡುತ್ತವೆ. ಇಂಥಾ ಸಂದರ್ಭದಲ್ಲಿ ಪೋಷಕರು ನಾರ್ಮಲ್ ಜ್ವರ ಅಂತ ತಿಳ್ಕೊಂಡು ಟ್ಯಾಬ್ಲೆಟ್, ಸಿರಪ್ ಕೊಟ್ಟು ಸುಮ್ಮನಾಗಿಬಿಡುತ್ತಾರೆ. ಆದ್ರೆ ಮಕ್ಕಳನ್ನು ಕಾಡೋದು ಯಾವಾಗ್ಲೂ ಸಾಮಾನ್ಯ ಜ್ವರ ಎಂದು ಹೇಳುವಂತಿಲ್ಲ. ಡೆಂಗ್ಯೂ, ಚಿಕುನ್ ಗುನ್ಯಾ ಆಗಿದ್ದು ನೀವು ನಾರ್ಮಲ್ ಜ್ವರದ ಔಷಧಿ ಕೊಡುತ್ತಿದ್ದರೆ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡಬಹುದು. ಹಾಗಿದ್ರೆ, ಮಕ್ಕಳಿಗೆ ಬಂದಿರೋದು ಸಾಮಾನ್ಯ ಜ್ವರ ಅಲ್ಲಾಂತ ತಿಳ್ಕೊಳ್ಳೋದು ಹೇಗೆ? ತಜ್ಞ ವೈದ್ಯರಾದ ಡಾ.ಪ್ರಮೋದ್ ವಿ.ಎಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.