Asianet Suvarna News Asianet Suvarna News

ಕೋವಿಡ್ ಬಳಿಕ ಹೆಚ್ಚಾಯ್ತಾ ಹಾರ್ಟ್ಅಟ್ಯಾಕ್‌, ತಜ್ಞರು ಈ ಬಗ್ಗೆ ಏನ್‌ ಹೇಳ್ತಾರೆ?

ಹಾರ್ಟ್ ಅಟ್ಯಾಕ್ ಅನ್ನೋದು, ನೆಗಡಿ, ಕೆಮ್ಮು ಜ್ವರಕ್ಕಿಂತಾ ಕಾಮನ್ ಅನ್ನೋ ಅತಿಭಯಂಕರ ವಾತಾವರಣ ನಿರ್ಮಾಣವಾಗಿದೆ.. ನಿನ್ನೆ ಮೊನ್ನೆ ತನಕ ಗಟ್ಟಿ ಮುಟ್ಟಾಗಿದ್ದೋರೇ, ಹಾರ್ಟ್ ಅಟ್ಯಾಕ್ ಆಗಿ ಪ್ರಾಣ ಕಳ್ಕೊಳ್ತಾರೆ.. ಹಾಗಾದ್ರೆ, ಈ ಹಾರ್ಟ್ ಅಟ್ಯಾಕ್ ಆಗೋ ಮುನ್ನ, ಯಾವ ಸುಳಿವನ್ನೂ ಕೊಡೋದೇ ಇಲ್ವಾ..? ಮಾಹಿತಿ ಇಲ್ಲಿದೆ.

ಇತ್ತೀಚಿಗೆ ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ತಿದೆ. ಮಕ್ಕಳು, ಯುವಕರು, ವೃದ್ಧರು ಎನ್ನದೆ ಎಲ್ಲರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಡ್ಯಾನ್ಸ್ ಕ್ಲಾಸ್, ಗ್ರೌಂಡ್, ಮದುವೆ ಮನೆ ಹೀಗೆ ಎಲ್ಲೆಂದರಲ್ಲಿ ಜನರು ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಹೀಗಿರುವಾಗ ಅದರಲ್ಲೂ ಮುಖ್ಯವಾಗಿ ಆ ಜವರಾಯನ ಯಮಪಾಶ ಯುವಕರಿಗೇ ಶಾಪವಾಗಿದ್ಯೇನೋ ಅನ್ನುಸ್ತಿದೆ.. ಕೋವಿಡ್ ಬಳಿಕ ಈ ಸಾವಿನ ಲೆಕ್ಕ ತೆಗೆದುನೋಡಿದ್ರೆ ಇನ್ನೂ ಭಯವಾಗುತ್ತೆ.. ಯಾಕಂದ್ರೆ, ಇತ್ತೀಚಿನ ದಿನಗಳಲ್ಲಿ ಯುವಕರ ಹಾರ್ಟ್ ಅಟ್ಯಾಕ್ ಸಾಧ್ಯತೆ 20% ಏರಿಕೆಯಾಗಿದೆ ಎಂಬುದು ವರದಿಗಳಿಂದ ತಿಳಿದುಬಂದಿದೆ. ಈ ಮಹಾ ಅಪಾಯದಿಂದ ಪಾರಾಗೋಕೆ ಮಾರ್ಗವೇನು ? ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ ನೋಡೋಣ.

ಹೆಚ್ತಿದೆ ಸಡನ್‌ ಹಾರ್ಟ್‌ಅಟ್ಯಾಕ್ ಕೇಸ್‌, ದಿನಕ್ಕೆ 11 ನಿಮಿಷ ವಾಕ್‌ ಮಾಡಿ ಜೀವ ಉಳಿಸಿಕೊಳ್ಬೋದಾ?

Video Top Stories