ಮಕ್ಕಳಲ್ಲಿ ಹೆಚ್ಚಾಗ್ತಿರೋ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣಗಳೇನು?
ಇತ್ತೀಚಿನ ಕೆಲ ವರ್ಷಗಳಲ್ಲಿ ಯುವಜನರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಅದೆಷ್ಟೋ ಮಕ್ಕಳು ಹೃದಯ ಸಂಬಂಧಿತ ಕಾಯಿಲೆಗಳಿಂದಲೇ ಸಾವನ್ನಪ್ಪುತ್ತಾರೆ. ಇದಕ್ಕೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬಹುದು. ಈ ಬಗ್ಗೆ ತಜ್ಞ ವೈದ್ಯರು ಏನಂತಾರೆ ತಿಳಿಯೋಣ.
ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾದುದು. ಹೀಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದುದು ಅಗತ್ಯ. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಲ್ಲಿ ಮಕ್ಕಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗ್ತಿವೆ. ಪ್ರತಿ ವರ್ಷ ಹುಟ್ಟುವ ಒಂದು ಸಾವಿರ ಮಕ್ಕಳಲ್ಲಿ ಸುಮಾರು 6ರಿಂದ 7 ಮಕ್ಕಳಲ್ಲಿ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿರುತ್ತದೆ. ಶೇಕಡಾ ಐವತ್ತರಷ್ಟು ಮಕ್ಕಳಲ್ಲಿ ಕಂಡು ಬರುವ ಈ ಸಮಸ್ಯೆಯನ್ನು ಓಪನ್ ಹಾರ್ಟ್ ಸರ್ಜರಿ ಇಲ್ಲದೆಯೂ ಕಡಿಮೆ ಮಾಡಬಹುದು ಎಂದು ಹೇಳ್ತಾರೆ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ರೋಗಿಗಳು ತುರ್ತು ಚಿಕಿತ್ಸೆಗೆ ಬಂದಾಗ ಹಣ ನೋಡಲ್ಲ, ಜೀವ ಉಳಿಸೋದು ಮುಖ್ಯ; ಡಾ.ಸಿ.ಎನ್.ಮಂಜುನಾಥ್