ಕೊಲೆಸ್ಟ್ರಾಲ್‌ನಿಂದ ಬೊಜ್ಜು ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುತ್ತಾ?
ಕೊಲೆಸ್ಟ್ರಾಲ್ ಮಟ್ಟ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು. ಇದು ಹೃದಯದ ಕಾಯಿಲೆಗೆ ಕಾರಣವಾಗುವುದರ ಜೊತೆಗೆ ಮರಣದ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್‌ನಿಂದ ಬೊಜ್ಜು ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ? ಆದ್ರೆ ಕೊಲೆಸ್ಟ್ರಾಲ್‌ನಿಂದ ಬೊಜ್ಜು ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುತ್ತೆ ಅಂತಾರೆ. ಇದು ಎಷ್ಟರಮಟ್ಟಿಗೆ ನಿಜ.
ಹೆಚ್ಚಿನ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೊಲೆಸ್ಟ್ರಾಲ್ ಹೆಚ್ಚಾಗುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ, ಇದು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣವಾಗಿದೆ. ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ, ಅತಿಯಾದ ಆಲ್ಕೊಹಾಲ್ ಸೇವನೆ, ದೀರ್ಘಕಾಲದ ಒತ್ತಡ, ಧೂಮಪಾನ, ತಂಬಾಕು ಸೇವನೆ ಮತ್ತು ಬೊಜ್ಜು ಸೇರಿದಂತೆ ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಕಾರಣವಾಗುವ ಹಲವಾರು ಅಂಶಗಳಿವೆ. ಮಾತ್ರವಲ್ಲ ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಸಹ ಹೆಚ್ಚು. ಕೊಲೆಸ್ಟ್ರಾಲ್‌ನಿಂದ ಬೊಜ್ಜು ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುವ ಛಾನ್ಸ್ ಹೆಚ್ಚಿರುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞ ವೈದ್ಯರಾದ ಡಾ.ರಾಜೇಶ್ ಮಾಹಿತಿ ನೀಡಿದ್ದಾರೆ.