Asianet Suvarna News Asianet Suvarna News

ಎದೆನೋವು ಜೊತೆ ವಾಂತಿ ಬಂದ್ರೆ ಎಚ್ಚರ!

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ವಯಸ್ಕರಲ್ಲಿ ಹಾರ್ಟ್‌ಅಟ್ಯಾಕ್ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ಹೃದಯಾಘಾತದ ಸೂಚನೆಗಳನ್ನು ತಿಳಿದುಕೊಳ್ಳೋದು ಮುಖ್ಯ. ಈ ಬಗ್ಗೆ ಡಾ.ಮಹಾತೇಂಶ್‌ ಆರ್‌ ಚರಂತಿಮಠ್‌ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಕಳೆದ ಮೂರು ವರ್ಷಗಳಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ವಿಪರೀತವಾಗಿದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲ ವಯಸ್ಸಿನವರಿಗೂ ಈ ಹೃದಯಾಘಾತ ಕಾಣಿಸಿಕೊಳ್ತಿದೆ. ಕಚೇರಿ ಕೆಲಸ ಮಾಡುವಾಗ, ಜಿಮ್ ಮಾಡ್ತಿರುವಾಗ, ಡಾನ್ಸ್ ಮಾಡ್ತಿರುವಾಗ, ಊಟ ಮಾಡ್ತಿರುವ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಇಂದು ಆರಾಮವಾಗಿ ಓಡಾಡಿಕೊಂಡಿದ್ದ ವ್ಯಕ್ತಿ ನಾಳೆ ಇರ್ತಾನೆ ಎನ್ನುವ ಗ್ಯಾರಂಟಿ ಇಲ್ಲ. ಹೃದಯದ ಬಗ್ಗೆ ಈಗ ಭಯ ಶುರುವಾಗಿದೆ. ಯಾವುದೇ ವ್ಯಕ್ತಿಗೆ ಹೃದಯಾಘಾತ ಆಗುವ ಮೊದಲು ಕೆಲವೊಂದು ಸಂಕೇತ ಸಿಗುತ್ತದೆ. ಒಂದು ತಿಂಗಳ ಮೊದಲೇ ವ್ಯಕ್ತಿಗೆ ದೇಹ ಸಿಗ್ನಲ್ ನೀಡಿರುತ್ತದೆ. ಬಹುತೇಕರು ಇದನ್ನು ನಿರ್ಲಕ್ಷ್ಯ ಮಾಡುವ ಕಾರಣ ಜೀವ ಬಿಡಬೇಕಾಗುತ್ತದೆ. ಹೀಗಾಗಿ ಹೃದಯಾಘಾತದ ಮುನ್ಸೂಚನೆ ಏನು ಅಂತ ತಿಳಿಯೋಣ. 

ಹಾರ್ಟ್‌ಅಟ್ಯಾಕ್‌ ಬಗ್ಗೆ ಮೊದ್ಲೇ ತಿಳಿಯೋಕೆ ECG ಮಾಡಿ