ಮಕ್ಕಳಿಗೆ ಜ್ವರ ಬಂದಾಗ ಸ್ಪಾಂಜಿಂಗ್ ಮಾಡೋದು ಸರೀನಾ?
ಪುಟ್ಟ ಮಕ್ಕಳಿಗೆ ಜ್ವರ ಬಂದು ಮೈ ಬಿಸಿಯಾದಾಗ ಪೋಷಕರಿಗೆ ಏನು ಮಾಡಬೇಕೆಂದು ಕೈ ಕಾಲೇ ಆಡೋದಿಲ್ಲ. ಹೀಗಿದ್ದಾಗ ಹೆಚ್ಚಿನವರು ಅನುಸರಿಸುವ ವಿಧಾನವೆಂದ್ರೆ ಒದ್ದೆಬಟ್ಟೆಯಿಂದ ಸ್ಪಾಜಿಂಗ್ ಮಾಡುವುದು. ಆದ್ರೆ ಹೀಗೆ ಮಾಡೋದು ಎಷ್ಟರಮಟ್ಟಿಗೆ ಸರಿ.
ಮಕ್ಕಳಿಗೆ ಜ್ವರ ಬಂದಾಗ ಪೋಷಕರು ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾರೆ. ಮೈ ಬಿಸಿಯಿದೆ ಎಂದು ಮಕ್ಕಳ ಬಟ್ಟೆ ಬಿಚ್ಚಿ ಫ್ಯಾನ್ ಹಾಕುತ್ತಾರೆ. ಒದ್ದೆ ಬಟ್ಟೆಯಲ್ಲಿ ಸ್ಪಾಂಜಿಂಗ್ ಮಾಡುತ್ತಾರೆ. ಆದರೆ ಹೀಗೆ ಮಾಡಬಾರದು ಅನ್ನುತ್ತಾರೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್. ಬದಲಿಗೆ ಒನ್ ಪಾಯಿಂಟ್ ಆಫ್ ಟೈಂನಲ್ಲಿ ಫೀವರ್ ಬ್ರೇಕ್ ಆಗುತ್ತೆ. ಸ್ವೆಟ್ಟಿಂಗ್ ಆಗುತ್ತೆ. ಹೀಗೆ ಆಗೋಕೆ ದೇಹವನ್ನು ಬಿಸಿಯಾಗಿಡುವುದು ಮುಖ್ಯ ಎಂದವರು ಹೇಳುತ್ತಾರೆ.
Heartattack in Children: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ತಜ್ಞರು ಏನಂತಾರೆ?