Asianet Suvarna News Asianet Suvarna News

ಬಿಎಂಟಿಸಿ ಚಾಲಕನಿಗೆ ಅನಾರೋಗ್ಯ, ಬಸ್ ಚಲಾಯಿಸಿ ಮಾನವೀಯತೆ ಮೆರೆದ ಎಸಿಪಿ

ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲನೆ ವೇಳೆಯೇ ಅಸ್ವಸ್ಥಗೊಂಡಿದ್ರು. ಆಸ್ಪತ್ರೆಯ ಬಳಿ ಬಸ್‌ ನಿಲ್ಲಿಸಿದ್ರು. ಈ ಸಂದರ್ಭಧಲ್ಲಿ ಎಸಿಪಿ ರಾಮಚಂದ್ರ ಸ್ವತಃ ಬಸ್ ಚಾಲನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಬಿಎಂಟಿಸಿ ಬಸ್‌ ಚಾಲನೆ ವೇಳೆ ಚಾಲಕರು ಅಸ್ವಸ್ಥರಾಗಿರುವ ಘಟನೆ ಹಲವರು ಬಾರಿ ನಡೆದಿದೆ. ಈ ರೀತಿಯಾಗಿ ಬಸ್ ಎಲ್ಲೆಲ್ಲೋ ಓಡಾಡಿ ಅಪಘಾತಗಳೂ ಸಂಭವಿಸಿವೆ. ಹಾಗೆಯೇ ಬೆಂಗಳೂರಿನ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲನೆ ವೇಳೆಯೇ ಅಸ್ವಸ್ಥಗೊಂಡಿದ್ರು. ಆಸ್ಪತ್ರೆಯ ಬಳಿ ಬಸ್‌ ನಿಲ್ಲಿಸಿದ್ರು. ಈ ಸಂದರ್ಭಧಲ್ಲಿ ಎಸಿಪಿ ರಾಮಚಂದ್ರ ಸ್ವತಃ ಬಸ್ ಚಾಲನೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಚಾಲಕನನ್ನು ಅಂಬುಲೈನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ರವಾನಿಸಿ, ನಿಲ್ದಾಣದವರೆಗೆ ಎಸಿಪಿ ರಾಮಚಂದ್ರ ಸ್ವತಃ ಬಸ್ ಚಾಲನೆ ಮಾಡಿದ್ರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಎಸಿಪಿ ಮಾಡಿದ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೋಪಿ ಧರಿಸಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಪ್ರಶ್ನಿಸಿದ ಮಹಿಳೆ, ವಿಡಿಯೋ ವೈರಲ್‌!

 

 

Video Top Stories