ಟೋಪಿ ಧರಿಸಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಪ್ರಶ್ನಿಸಿದ ಮಹಿಳೆ, ವಿಡಿಯೋ ವೈರಲ್‌!

ಬಿಎಂಟಿಸಿಯ ಮುಸ್ಲಿಂ ಕಂಡಕ್ಟರ್‌ ಕರ್ತವ್ಯದ ವೇಳೆ ಟೋಪಿ ಧರಿಸಿದ್ದನ್ನು ಮಹಿಳೆಯೊಬ್ಬಳು ಪ್ರಶ್ನೆ ಮಾಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲಿಯೇ ಪರ ವಿರೋಧ ಚರ್ಚೆ ಕೂಡ ಆರಂಭವಾಗಿದೆ.

First Published Jul 11, 2023, 11:43 PM IST | Last Updated Jul 11, 2023, 11:43 PM IST

ಬೆಂಗಳೂರು (ಜು.11): ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ ಆಗಿರುವ ಮುಸ್ಲಿಂ ವ್ಯಕ್ತಿ, ಕರ್ತವ್ಯದ ವೇಳೆ ಹಸಿರು ಬಣ್ಣದ ಟೋಪಿ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನು ಮಹಿಳೆಯೊಬ್ಬರು ಪ್ರಶ್ನಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರವೇ ಸಮವಸ್ತ್ರ ನೀಡುತ್ತದೆ, ಅದರಲ್ಲಿ ಈ ಹಸಿರು ಟೋಪಿ ಕೂಡ ಭಾಗವಾಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಂಡಕ್ಟರ್‌ ಹಾರಿಕೆ ಉತ್ತರ ನೀಡುತ್ತಲೇ ಟೋಪಿಯನ್ನು ತೆಗೆಯಲು ನಿರಾಕರಿಸುತ್ತಾರೆ.

'ನನ್ನ ಗಂಡನನ್ನು ಹುಡುಕಿಕೊಟ್ರೆ 5 ಸಾವಿರ ಡಾಲರ್ ಗಿಫ್ಟ್‌..' ಸುಂದರಿಯ ಆಫರ್‌ಗೆ ಭರ್ಜರಿ ರೆಸ್ಪಾನ್ಸ್‌!

ಈ ವಿಡಿಯೋ ವೈರಲ್‌ ಆಗಿದ್ದು, ಮಹಿಳೆಯ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೆಲವರು ಹೇಳಿದ್ದರೆ, ಇದು ಅನಗತ್ಯ ವಿಚಾರ ಎಂದು ಕೆಲವರು ಹೇಳಿದ್ದಾರೆ.