ಮಳೆಗಾಲದಲ್ಲಿ ಮಕ್ಕಳನ್ನು ಕಾಡೋ ಡೆಂಗ್ಯೂ..ಪೋಷಕರೇ ಇರಲಿ ಎಚ್ಚರ
ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳಿಗೆ ಡೆಂಗ್ಯೂ ಬಂದರೆ ಥಟ್ಟನೆ ಗುರುತಿಸುವುದು ಕಷ್ಟ. ಇದನ್ನು ಸುಲಭವಾಗಿ ಗುರುತಿಸುವುದು ಹೇಗೆ? ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.
ಮಕ್ಕಳ ಆರೋಗ್ಯ ಯಾವಾಗಲೂ ತುಂಬಾ ಸೂಕ್ಷ್ಯವಾಗಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಬಂದ್ರೆ ಹೇಳೋದೆ ಬೇಡ. ಅದರಲ್ಲೂ ಮಕ್ಕಳು ಹೆಚ್ಚಾಗಿ ಮಳೆನೀರಿನಲ್ಲಿಯೇ ಆಟವಾಡೋ ಕಾರಣ ಜ್ವರ ಬರೋ ಸಾಧ್ಯತೆ ಹೆಚ್ಚಿರುತ್ತದೆ. ಮಾತ್ರವಲ್ಲ ಮಾನ್ಸೂನ್‌ನಲ್ಲಿ ಸೊಳ್ಳೆ ಕಾಟ ಸಹ ಹೆಚ್ಚಾಗೋ ಕಾರಣ ಡೆಂಗ್ಯೂ, ಮಲೇರಿಯಾ ಬರೋದೇನೂ ಕಷ್ಟವಲ್ಲ. ಹೀಗಾಗಿ ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಳೆಗಾಲದಲ್ಲಿ ಮಕ್ಕಳಿಗೆ ಡೆಂಗ್ಯೂ ಬಂದರೆ ಥಟ್ಟನೆ ಗುರುತಿಸುವುದು ಕಷ್ಟ. ಡೆಂಗ್ಯೂ ಬಂದಾಗ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳು ಊಟವನ್ನು ಮಾಡುವುದಿಲ್ಲ ಎಂದು ಡಾ.ಪ್ರಮೋದ್ ವಿ. ಎಸ್ ಮಾಹಿತಿ ನೀಡಿದ್ದಾರೆ.