ಮಕ್ಕಳ ತಲೆಗೆ ಡಬ್ಬಾ ಹಾಕಿ ಪರೀಕ್ಷೆ, ವಿಚಿತ್ರ ಐಡಿಯಾಗೆ ಡಿಡಿಪಿಐ ಗರಂ

ವಿದ್ಯಾರ್ಥಿಗಳ ಕಾಪಿ ತಡೆಗೆ ಶಿಕ್ಷಕರ ವಿಚಿತ್ರ ಐಡಿಯಾ| ಮಕ್ಕಳ ತೆಲೆಗೆ ಡಬ್ಬಾ ಹಾಕಿಸಿ ಪರೀಕ್ಷೆ ಬರೆಸಿದ ಶಿಕ್ಷಕರು| ಹಾವೇರಿ ನಗರದ ಭಗತ್ ಪಿ.ಯು.ಕಾಲೇಜಿನಲ್ಲಿ ವಿಚಿತ್ರ ಪ್ಲಾನ್

Share this Video
  • FB
  • Linkdin
  • Whatsapp

ಹಾವೇರಿ[ಅ.18]: ಪರೀಕ್ಷಾ ಹಾಲ್‌ನಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯದಂತೆ ಕಾವಲುಗಾರನಾಗಿ ಸಿಸಿಟಿವಿ ಕ್ಯಾಮರಾ ನೋಡಿದ್ದೇವೆ. ಆದರೆ ಹಾವೇರಿ ನಗರದ ಭಗತ್ ಪಿ.ಯು.ಕಾಲೇಜಿನಲ್ಲಿ ಮಾತ್ರ ಮಕ್ಕಳು ಕಾಪಿ ಮಾಡದಂತೆ ತಡೆಯಲು ವಿಚಿತ್ರ ಐಡಿಯಾ ಒಂದನ್ನು ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಈ ಘಟನೆ ನಡೆದಿದ್ದು, ಕುದುರೆಯ ಕಣ್ಣಿಗೆ ಪಟ್ಟೆ ಹಾಕುವಂತೆ ವಿದ್ಯಾರ್ಥಿಗಳ ತಲೆಗೆ ಡಬ್ಬಿ ಹಾಕಿ ಶಿಕ್ಷಕರು ಪರೀಕ್ಷೆ ಬರೆಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿವೆ. 

ಈ ವಿಚಿತ್ರ ಐಡಿಯಾ ಕೇಳಿದ ಆದ ಡಿಡಿಪಿಐ ಫುಲ್ ಗರಂ ಅಗಿದ್ದಾರೆ. ಹೀಗಾಗಿ ಇವತ್ತು ಶುಕ್ರವಾರ ಆಡಳಿತ ಮಂಡಳಿಯು ಸಹಜ ಸ್ಥಿತಿಯಲ್ಲಿ ಪರೀಕ್ಷೆ ಬರೆಸುತ್ತಿದ್ದಾರೆ.

ಮಕ್ಕಳೇ ನಕಲು ಮಾಡ್ಬೇಡಿ, ಇಲ್ದಿದ್ರೆ ಮೇಷ್ಟ್ರು ಹೀಗೂ ಮಾಡ್ತಾರೆ!

Related Video