Asianet Suvarna News Asianet Suvarna News

ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ: ಸರ್ಕಾರ ನೀಡಿದ ಡಸ್ಟ್‌ಬಿನ್ ಅಂಗಡಿಗೆ ಮಾರಿದ ಗ್ರಾ.ಪಂ.

ಸ್ವಚ್ಛ ಭಾರತ್‌ ಯೋಜನೆಯಲ್ಲಿ  ಹಾವೇರಿ ಜಿಲ್ಲೆಯ ಕನವಳ್ಳಿ ಪಂಚಾಯತಿ ಗೋಲ್‌ಮಾಲ್‌ ಮಾಡಿದೆ. ಒಣ-ಹಸಿ ಕಸ ಸಂಗ್ರಹಕ್ಕೆ ಗ್ರಾಮ ಪಂಚಾಯತ್‌ಗೆ ಸರ್ಕಾರ  ನೀಡಿದ್ದ ಡಬ್ಬಿಗಳನ್ನು  ಅಂಗಡಿಗಳಿಗೆ  ಮಾರಾಟ ಮಾಡಲಾಗಿದೆ.

 ಸ್ವಚ್ಛ ಭಾರತ್‌ ಯೋಜನೆಯಲ್ಲಿ  ಹಾವೇರಿ ಜಿಲ್ಲೆಯ ಕನವಳ್ಳಿ ಪಂಚಾಯತಿ ಗೋಲ್‌ಮಾಲ್‌ ಮಾಡಿದೆ. ಒಣ-ಹಸಿ ಕಸ ಸಂಗ್ರಹಕ್ಕೆ ಗ್ರಾಮ ಪಂಚಾಯತ್‌ಗೆ ಸರ್ಕಾರ  ನೀಡಿದ್ದ ಡಬ್ಬಿಗಳನ್ನು  ಅಂಗಡಿಗಳಿಗೆ  ಮಾರಾಟ ಮಾಡಲಾಗಿದೆ. ಗ್ರಾಮಸ್ಥರಿಗೆ ಫ್ರೀ ನೀಡಬೇಕಿದ್ದ ಡಬ್ಬಿಗಳು ಅಂಗಡಿಯಲ್ಲಿ ಮಾರಾಟ ಮಾಡಲಾಗಿದ್ದು,ಡಸ್ಟ್‌ಬಿನ್‌ ಖರೀದಿಗೆಂದು ಅಂಗಡಿಗೆ ತೆರಳಿದ್ದ ಯುವಕರಿಗೆ ಶಾಕ್‌ ಆಗಿದೆ . ಜೈ ಹನುಮಾನ್‌ ಎಂಬ ಅಂಗಡಿಯೊಂದರಲ್ಲಿ 70  ರೂ ಅಂತೆ ಒಂದು ಡಸ್ಟ್‌ಬಿನ್‌ ಮಾರಾಟ ಮಾಡಲಾಗಿದ್ದು, ಮಾರಾಟ ಮಾಡುತ್ತಿರುವುದನ್ನು  ಯುವಕರು  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  ಇನ್ನು ಇದರಿಂದ ಅಧಿಕಾರಿಗಳು , ಪಂಚಾಯತಿ ಸದಸ್ಯರ ವಿರುದ್ದ  ಗ್ರಾಮಸ್ಥರು ರೊಚ್ಚಿಗೆದ್ದಿದ್ದು, ಆರೋಪದ ಬೆನ್ನಲ್ಲೇ ಪಿಡಿಓ ಅಮಾನತು ಮಾಡಿ ಸಿಇಓ ಆದೇಶ ನೀಡಿದ್ದಾರೆ,
 

Video Top Stories