Summer Health Tips: ಬೇಸಿಗೆಯಲ್ಲಿ ಯಾವ ಹಣ್ಣು-ತರಕಾರಿ ತಿನ್ನೋದು ಒಳ್ಳೇದು?
ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ಹೆಚ್ಚಾಗಿದೆ. ಹೀಗಾಗಿ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಹಾಗೆಯೇ ಹೆಚ್ಚು ನೀರಿನಂಶವಿರುವ ಹಣ್ಣು-ತರಕಾರಿಗಳನ್ನು ಸಹ ಸೇವಿಸುವುದು ಒಳ್ಳೆಯದು. ಈ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿ ಕಿರಣ್ ಮಾಹಿತಿ ನೀಡಿದ್ದಾರೆ.
ಬೇಸಿಗೆಯಲ್ಲಿ ಆರೋಗ್ಯ ಬೇಗ ಹದಗೆಡುತ್ತದೆ. ಹೀಗಾಗಿ ತಿನ್ನೋ ಆಹಾರದ ಬಗ್ಗೆ ಹೆಚ್ಚು ಗಮನಹರಿಸಬೇಕು. ಅದರಲ್ಲೂ ಬೇಸಿಗೆಯಲ್ಲಿ ದೇಹ ಡಿಹೈಡ್ರೇಟ್ ಆಗೋ ಸಮಸ್ಯೆ ಕಾಡೋ ಕಾರಣ ಹೆಚ್ಚೆಚ್ಚು ನೀರು ಕುಡಿಯಬೇಕಾದುದು ಅಗತ್ಯ. ಅಥವಾ ಹೆಚ್ಚು ನೀರಿನಂಶವಿರುವ ಹಣ್ಣು ಅಥವಾ ತರಕಾರಿಗಳನ್ನು ಆಯ್ದುಕೊಳ್ಳಬೇಕು. ಸಮ್ಮರ್‌ನಲ್ಲಿ ಕಲ್ಲಂಗಡಿ, ಕರಬೂಜ ಹಣ್ಣು, ಎಳನೀರು ಮೊದಲಾದವುಗಳನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೇದು ಅಂತಾರೆ ತಜ್ಞ ವೈದ್ಯರಾದ ಡಾ.ಸಾಯಿ ಕಿರಣ್. ಮಾತ್ರವಲ್ಲ ತರಕಾರಿಗಳಲ್ಲಿ ಸೌತೆಕಾಯಿ, ಟೊಮೇಟೋ, ಸೊಪ್ಪನ್ನು ಹೆಚ್ಚೆಚ್ಚು ತಿನ್ನಬಹುದು ಎಂದು ಸಲಹೆ ನೀಡುತ್ತಾರೆ. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.