Summer Health Tips: ಬೇಸಿಗೆಯಲ್ಲಿ Heatstroke ಆಗುತ್ತೆ ಹುಷಾರ್‌!

ಬೇಸಿಗೆ ಕಾಲ ಶುರುವಾಗಿದೆ. ನೆತ್ತಿ ಮೇಲೆ ಸುಡೋ ಬಿಸಿಲು ಆರೋಗ್ಯವನ್ನು ಹದಗೆಡಿಸುತ್ತಿದೆ. ಅದರಲ್ಲೂ ಈ ವರ್ಷ ಬಿಸಿಲ ಧಗೆ ತುಸು ಹೆಚ್ಚಾಗಿಯೇ ಇದೆ. ಬಿಸಿಲು, ಸೆಖೆ, ಧಗೆಯ ಮಧ್ಯೆ ಆರೋಗ್ಯ ನೋಡಿಕೊಳ್ಳೋದೆ ಕಷ್ಟ. ಅದ್ರಲ್ಲೂ ಬೇಸಿಗೆಯಲ್ಲಿ ಹಲವರನ್ನು ಕಾಡೋ ಹೀಟ್‌ ಸ್ಟ್ರೋಕ್ ಬಗ್ಗೆ ನಿಮ್ಗೆ ಗೊತ್ತಿದ್ಯಾ?

First Published Apr 8, 2023, 2:13 PM IST | Last Updated Apr 8, 2023, 2:13 PM IST

ಬೇಸಿಗೆ ಎಲ್ಲರನ್ನೂ ಹೈರಾಣಾಗಿಸುತ್ತಿದೆ. ಸುಡುವ ಬಿಸಿಲ ಧಗೆಗೆ ಎಲ್ಲರೂ ಕಂಗಾಲಾಗಿದ್ದಾರೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಆರೋಗ್ಯಕರ ಆಹಾರ, ಪಾನೀಯವನ್ನು ಸೇವಿಸುತ್ತಿದ್ದಾರೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕು. ಇಲ್ಲದಿದ್ದಲ್ಲಿ ಡಿಹೈಡ್ರೇಶನ್ ಸಮಸ್ಯೆ ಕಾಡುತ್ತೆ. ಮಾತ್ರವಲ್ಲ ಬಿಸಿಲಿನಲ್ಲಿ ಓಡಾಡುವವರಿಗೆ, ಕೆಲಸ ಮಾಡುವವರಿಗೆ ಹೀಟ್ ಸ್ಟ್ರೋಕ್ ಸಮಸ್ಯೆಯೂ ಕಾಡಬಹುದು. ಈ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿಕಿರಣ್‌ ಏನ್ ಹೇಳ್ತಾರೆ ತಿಳಿಯೋಣ.

ಸುಡುವ ಬಿಸಿಲಿನಲ್ಲಿ ಕೋಲ್ಡ್‌ ವಾಟರ್ ಕುಡಿತೀರಾ? ಹೃದಯ ಬಡಿತ ಸ್ಲೋ ಆಗುತ್ತೆ ಹುಷಾರ್‌!