ಗ್ರಹಣ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋದು ಮೂಢನಂಬಿಕೆನಾ?
ಗ್ರಹಣ ಸಮಯದಲ್ಲಿ ತಿನ್ನುವುದು ನಿಷಿದ್ಧವಾಗಿರುವುದರ ಹಿಂದೆ ವೈಜ್ಞಾನಿಕ ಕಾರಣ ಇದೆಯೇ? ಗ್ರಹಣ ಅಮಾವಾಸ್ಯೆಯಲ್ಲೇ ಬಂದಿರುವುದರಿಂದ ಪಿತೃಕಾರ್ಯ ಮಾಡಬಹುದೇ?
ಗ್ರಹಣ ಕಾಲದಲ್ಲಿ ಭೂಮಿಗೆ ಸೂರ್ಯನ ಬೆಳಕು ಬರದಂತೆ ಚಂದ್ರ ಮರೆಯಾಗಿ ನಿಲ್ಲುತ್ತಾನೆ. ಅದರ ಮಧ್ಯೆಯೂ ದಾಟಿ ಬರುವ ಸೂರ್ಯನ ಕಿರಣಗಳು ಬಹಳ ಅಪಾಯಕಾರಿ. ಈ ಕಾರಣದಿಂದಾಗಿ ಈ ಸಂದರ್ಭದಲ್ಲಿ ಆಹಾರ ಸೇವಿಸಬಾರದು ಎನ್ನುತ್ತದೆ ಧಾರ್ಮಿಕ ಗ್ರಂಥಗಳು.. ಇದನ್ನೇ ವಿಜ್ಞಾನ ಅನುಮೋದಿಸುತ್ತದೆ. ಸೂರ್ಯನು ಆಹಾರಕ್ಕೆ ಸಂಬಂಧಿಸಿದವನು. ಅವನಿಲ್ಲದೆ ಬೆಳೆಗಳು ಬೆಳೆಯುವುದಿಲ್ಲ. ಆಹಾರ ಜೀರ್ಣವಾಗುವುದಿಲ್ಲ, ಆರೋಗ್ಯವೂ ಸಿಗುವುದಿಲ್ಲ.. ಈ ಬಗ್ಗೆ ವಿವರವಾಗಿ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ಈ ದಿನ ಅಮಾವಾಸ್ಯೆಯೂ ಆಗಿರುವುದರಿಂದ ಪಿತೃಕಾರ್ಯಗಳನ್ನು ಮಾಡಬಹುದೇ ಎಂಬುದನ್ನೂ ತಿಳಿಯಿರಿ..