ಕಾಳಿ ಕೈಲಿ ಸಿಗರೇಟ್ ಹೀನ ಪ್ರಚಾರ ತಂತ್ರ; ಇಷ್ಟಕ್ಕೂ ಈ ಕಾಳಿ ಯಾರು ಗೊತ್ತಾ?

ಕಾಳಿ ಮಾತೆಯ ವೇಷ ಧರಿಸಿದ ಪಾತ್ರಧಾರಿ ಸಿಗರೇಟ್ ಸೇದುತ್ತಿರುವುದು ಮತ್ತು ಸಲಿಂಗಿಗಳ ಧ್ವಜ ಹಿಡಿದಿರುವ ತಮಿಳು ಚಿತ್ರದ ಪೋಸ್ಟರ್‌ಗೆ ವಿರೋಧ ವ್ಯಕ್ತಪಡಿಸಿರುವ ಕಾಳಿ ಮಾತೆ ಆರಾಧಕಿ ಚಂದಾ ಪಾಂಡೆ ಕಾಳಿ ಎಂದರೆ ಯಾರು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಕಾಳಿ(Kaali) ದೇವಿಯ ಕೈಲಿ ಸಿಗರೇಟ್ ಕೊಟ್ಟು, ಹಿಂದೆ ಸಲಿಂಗಿಗಳ ಧ್ವಜ ಕೊಟ್ಟು ಸಿನಿಮಾವೊಂದರ ಪೋಸ್ಟರ್ ಪ್ರಚಾರದ ವಿವಾದಿತ ತಂತ್ರದ ಬಗ್ಗೆ ಕಾಳಿ ಮಾತೆಯ ಆರಾಧಕಿ ಚಂದಾ ಪಾಂಡೆ ವಿರೋಧ ವ್ಯಕ್ತಪಡಿಸಿದ್ದಾರೆ. ತಮಿಳು ನಿರ್ದೇಶಕಿ ಲೀನಾ ಮಣಿಮೇಕಲ(Leena Manimekala) ಪ್ರಚಾರಕ್ಕಾಗಿ ಮಾಡಿರುವ ಈ ಹೀನ ಕೃತ್ಯದ ಹಿನ್ನೆಲೆಯಲ್ಲಿ ಕಾಳಿ ಮಾತೆ ಯಾರು, ಆಕೆಯ ಸೃಷ್ಟಿ ಯಾಕಾಗಿ ಆಯಿತು ಎಂಬುದನ್ನು ವಿವರವಾಗಿ ತಿಳಿಸಿಕೊಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Story of Ahalya: ದೇವೇಂದ್ರನಿಗೆ ಮೈಯೆಲ್ಲಾ ಯೋನಿ! ಯಾಕೆ ಗೊತ್ತೆ?

ಒಂದು ಹೆಣ್ಣು ನಗ್ನಳಾಗಿ ಬರೋದಿಲ್ಲ ಮತ್ತು ಹೆಣ್ಣಿನಲ್ಲಿ ಅಷ್ಟು ಶಕ್ತಿ ಇರೋದಿಲ್ಲ ಎಂಬ ಭ್ರಾಂತಿಯಿಂದ, ನನ್ನ ಸಾವು ನಗ್ನ ಹೆಣ್ಣಿನಿಂದ ಮಾತ್ರ ಆಗಬೇಕು ಎಂಬ ವರ ಪಡೆದ ರಕ್ತ ಬೀಜಾಸುರ(Rakta Beejasura)ನನ್ನು ಅಂತ್ಯಗೊಳಿಸಲು ಬಂದ ಸ್ವರೂಪವೇ ಕಾಳಿ. ಹೆಣ್ಣಿನ ಗೌರವವನ್ನು ಎಲ್ಲಿಯೂ ತಗ್ಗಲು ಬಿಡದೆ ರಕ್ತ ಬೀಜಾಸುರನ ಸಂಹಾರ ಮಾಡುವ ಕಾಳಿಯ ಕತೆ ವಿಶಿಷ್ಠವಾಗಿದೆ. 

Related Video