Story of Ahalya: ದೇವೇಂದ್ರನಿಗೆ ಮೈಯೆಲ್ಲಾ ಕಣ್ಣುಗಳು ಯಾಕೆ ಗೊತ್ತೆ?

ದೇವೇಂದ್ರನಿಗೆ ಸಹಸ್ರಾಕ್ಷ ಎನ್ನುವುದು ನಿಮಗೆ ಗೊತ್ತಿರಬೇಕು. ಇದಕ್ಕೆ ಕಾರಣ ಆತನ ಮೈ ತುಂಬಾ ಕಣ್ಣುಗಳಿರುವುದು. ಈ ಕಣ್ಣುಗಳು ಮುಂಚೆ ಯೋನಿಗಳಾಗಿದ್ದವು ಎಂಬ ಕತೆ ನಿಮಗೆ ಗೊತ್ತೇ? ಆಗ ಆತನನ್ನು ಸಹಸ್ರಯೋನಿ ಎನ್ನಲಾಗುತ್ತಿತ್ತು. 

How Lord Devendras body covered with vaginas later bacame eyes skr

ವೇದಗಳಲ್ಲಿ ಶಕ್ರ ಎಂದೂ ಕರೆಯಲ್ಪಡುವ ಇಂದ್ರ(Indra)ನು ದೇವತೆಗಳ ರಾಜ. ಸ್ವರ್ಗ ಲೋಕದ ಅಧಿಪತಿ. ಅವನು ಮಳೆ ಮತ್ತು ಬಿರುಗಾಳಿಗಳ ದೇವರು. ಆದರೆ ಅದೇ ಸಮಯದಲ್ಲಿ, ಅವನು ತನ್ನ ಕುಖ್ಯಾತ ಮಾರ್ಗಗಳಿಗೆ ಹೆಸರುವಾಸಿಯಾಗಿದ್ದಾನೆ. ಬಾಲ ಕಾಂಡ ಮತ್ತು ಪದ್ಮ ಪುರಾಣದ ಪ್ರಕಾರ, ಲೈಂಗಿಕ ಹಗರಣದ ಕಾರಣದಿಂದ ಇಂದ್ರನ ದೇಹದ ಮೇಲೆ ಬರೋಬ್ಬರಿ 1000 ಕಣ್ಗಣುಗಳು(vaginas) ಸೃಷ್ಟಿಯಾಗಿದ್ದವು. ಇಂಥದ್ದೊಂದು ಭಯಾನಕ ಶಾಪ(Curse)ಕ್ಕೊಳಗಾದ ಪೌರಾಣಿಕ ಪ್ರಸಂಗ ನೀವು ಕೇಳಿದ್ದೀರಾ?

ಈ ಕತೆ ಪ್ರಾರಂಭವಾಗವುದು ಅಹಲ್ಯೆ(Ahalya)ಯಿಂದ. ತಾನೇ ತ್ರಿಲೋಕ ಸುಂದರಿ ಎಂದು ಬೀಗುತ್ತಿದ್ದ ಊರ್ವಶಿಯ ಸೊಕ್ಕು ಮುರಿಯಲು ಬ್ರಹ್ಮ(Brahma)ನು ಅಹಲ್ಯೆಯನ್ನು ಸೃಷ್ಟಿಸುತ್ತಾನೆ. ಅಹಲ್ಯೆ ಅನುರೂಪ ಸುಂದರಿಯಷ್ಟೇ ಅಲ್ಲ, ಅತ್ಯುನ್ನತ ಗುಣಗಳನ್ನೂ ಹೊಂದಿದ್ದಳು. ಇಂಥ ಉತ್ತಮ ಮಗುವನ್ನು ಸಾಕಲು ಮುದ್ಗಲನೆಂಬ ಮಹರ್ಷಿಗೆ ಉಡುಗೊರೆಯಾಗಿ ನೀಡಿದನು. ಈಕೆ ಜಗತ್ತಿನಲ್ಲಿಯೇ ಅತ್ಯಂತ ಸುಂದರಿಯಾಗಿ, ಮನಮೋಹಕ ಕನ್ಯೆಯಾಗಿ ಬೆಳೆದಳು. ಆಕೆಯ ರೂಪ, ಸದ್ಗುಣಕ್ಕೆ ಅತ್ಯುತ್ತಮ ಸದ್ಗುಣಗಳು, ವಿವೇಕ, ಆಳವಾದ ಬುದ್ಧಿವಂತಿಕೆ ಮತ್ತು ವೇದಗಳ ಜ್ಞಾನವನ್ನು ಹೊಂದಿರುವ ಮಹರ್ಷಿ ಗೌತಮರೇ ಸರಿಯಾದ ವ್ಯಕ್ತಿ ಎಂದು ಭಾವಿಸಿದ ಬ್ರಹ್ಮನು ಅಹಲ್ಯೆಯನ್ನು ಗೌತಮರಿಗೆ ಕೊಟ್ಟು ಮದುವೆ ಮಾಡಿಸಿದನು. 

ಅತ್ಯಂತ ಸುಂದರಿಯಾದ ಅಹಲ್ಯೆಯ ರೂಪ ಅಷ್ಟರಲ್ಲಾಗಲೇ ಮೂಲೋಕದ ದೇವ, ಅಸುರರನ್ನು ಆಕರ್ಷಿಸಿತ್ತು. ದೇವೇಂದ್ರ ಕೂಡಾ ಅಹಲ್ಯಳನ್ನು ಬಯಸಿದ್ದನು. ಗೌತಮ ಋಷಿಯೊಂದಿಗೆ ಮದುವೆಯಾದ ನಂತರವೂ, ದೇವತೆಗಳ ರಾಜನಾದ ಇಂದ್ರನು ಅವಳನ್ನು ಹಿಂಬಾಲಿಸುತ್ತಲೇ ಇದ್ದನು. ಆತನಿಗೆ ಆಕೆಯ ಮೇಲಿನ ಮೋಹದಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಆಗಲಿಲ್ಲ. 

ಪಾಪದ ಪ್ರಯತ್ನ
ಇಂದ್ರನು ಋಷಿಯು ಪ್ರತಿದಿನ ಮುಂಜಾನೆ ತನ್ನ ಆಶ್ರಮವನ್ನು ತೊರೆಯುವುದನ್ನು ಗಮನಿಸಿದನು. ಅವರು ತಮ್ಮ ಸ್ನಾನ ಮತ್ತು ಪ್ರಾರ್ಥನೆಗಾಗಿ ನದಿಗೆ ಒಂದೆರಡು ಗಂಟೆಗಳ ಕಾಲ ಹೋಗುತ್ತಾರೆಂಬ ವಿಷಯ ಅರಿತ ಇಂದ್ರನು ಇದೇ ಸಮಯ ಬಳಸಿ ಅಹಲ್ಯೆಯನ್ನು ಉಪಾಯದಿಂದ ಪಡೆಯಲು ನಿರ್ಧರಿಸಿದನು. ನಂತರ ಇಂದ್ರನು ಚಂದ್ರ(Moon)ನಿಗೆ ಹುಂಜದ ರೂಪವನ್ನು ತೆಗೆದುಕೊಂಡು ಗೌತಮ ಋಷಿಯನ್ನು ಬೆಳಗಾಗುವುದಕ್ಕಿಂತ ಮುಂಚೆಯೇ ಎಚ್ಚರಗೊಳಿಸಲು ಹೇಳಿದನು.

Vastu tips: ಮನೆಗೆ ಸಂಪತ್ತು ಆಕರ್ಷಿಸೋಕೆ ಈ ಅಪರೂಪದ ಸಸ್ಯ ನೆಡಿ..

ರಹಸ್ಯವಾದ ಸೆಡಕ್ಷನ್
ಚಂದ್ರ ಇಂದ್ರ ಹೇಳಿದಂತೆಯೇ ಅರ್ಧ ರಾತ್ರಿ 2 ಗಂಟೆಗೆ ಕೋಳಿ ಕೂಗುವ ಧ್ವನಿಯನ್ನು ಹೊರಡಿಸಿದನು. ಇದನ್ನು ಕೇಳಿದ ಋಷಿಯು ಎದ್ದು ತಮ್ಮ ಪವಿತ್ರ ಸ್ನಾನಕ್ಕೆ ಹೋದರು. ಆಗ ಇಂದ್ರ ತಾನು ಗೌತಮ ಋಷಿಯ ವೇಷದಲ್ಲಿ ಭೂಮಿಗೆ ಇಳಿದು ಅಹಲ್ಯೆಯ ಮನೆಗೆ ಪ್ರವೇಶಿಸಿದನು. ಅಹಲ್ಯೆಗೆ ತನ್ನ ಆಧ್ಯಾತ್ಮಿಕ ಶಕ್ತಿಯಿಂದಾಗಿ ಮುಂದೆ ನಿಂತವನು ತನ್ನ ಪತಿ ಅಲ್ಲ, ದೇವತೆಗಳ ರಾಜ ಇಂದ್ರ ಎಂಬುದು ತಿಳಿಯಿತು. 
ಕೂಡಲೇ ಅವಳು ಅವನನ್ನು ದೂರವಿರುವಂತೆ ಹೇಳಿದಳು. ಆದರೆ, ಮೊದಲೇ ಹೆಣ್ಣನ್ನು ರಮಿಸುವ ಕಲೆ ತಿಳಿದವನು ಇಂದ್ರ. ಆತ ಅವಳ ಸೊಗಸಾದ ರೂಪವನ್ನು ಹೊಗಳಲು ಸಿಹಿ ಸಾಲುಗಳನ್ನು ಬಳಸಿ ಅವಳನ್ನು ಮತ್ತಷ್ಟು ಮೋಹಿಸಿದನು. ಕಡೆಗೂ ಅಹಲ್ಯೆ ಅವನಿಗೆ ಮನಸೋತು ಅವನೊಂದಿಗೆ ಆನಂದದ ಸಮಯ ಕಳೆದಳು. ನಂತರ, ಅಹಲ್ಯೆಗೆ ತಾನು ಮಾಡಿದ್ದು ತಪ್ಪೆಂದು ಅರಿವಾಗಿ ಭಯವಾಯಿತು. ಕೂಡಲೇ ಇಂದ್ರನಿಗೆ ಅಲ್ಲಿಂದ ಹೊರಡಲು ಹೇಳಿದಳು. 

ಋಷಿಯ ಕೋಪ, ಶಾಪ
ಅಷ್ಟರಲ್ಲಾಗಲೇ ಗೌತಮ ಋಷಿಗಳು ಸ್ನಾನವನ್ನು ಪೂರೈಸಿಕೊ೦ಡು ನದಿಯಿ೦ದ ಹಿ೦ದಿರುಗಿ ಆಶ್ರಮದತ್ತ ಬಂದರು. ತನ್ನ ಆಶ್ರಮದ ದ್ವಾರದಲ್ಲಿ ತನ್ನದೇ ರೂಪವನ್ನು ಹೊ೦ದಿರುವ ವ್ಯಕ್ತಿಯು ಹೊರ ಬರುತ್ತಿರುವುದನ್ನು ಕ೦ಡು ಬೆರಗಾದರು. ದಿವ್ಯದೃಷ್ಟಿಯಿಂದ, ನಡೆದುದನ್ನೆಲ್ಲ ತಿಳಿದು ಕ್ರೋಧದಿಂದ ಕೆಂಡವಾದರು. ಕೂಡಲೇ ಅವರು ತಮ್ಮ ಪತ್ನಿ ಅಹಲ್ಯಾ, ಇಂದ್ರ ಹಾಗೂ ಈ ಪಾಪಕ್ಕೆ ಸಹಾಯ ಮಾಡಿದ್ದ ಚಂದ್ರನಿಗೆ ಶಾಪವಿತ್ತರು. 

ಅದರಂತೆ ಅಹಲ್ಯೆಗೆ 'ನಿನ್ನ ರೂಪದ ಅಹಂಕಾರ ಹೋಗಬೇಕೆಂದರೆ ನೀನು ಕಲ್ಲಿಗಿಂತ ಹೆಚ್ಚಿನವಳಲ್ಲ ಎಂಬುದು ತಿಳಿಯಬೇಕು. ವಿಷ್ಣುವೇ ಇಲ್ಲಿಗೆ ಕಾಲಿಡದ ಹೊರತು ನೀನು ಕಲ್ಲಾಗಿಯೇ ಇರು' ಎಂದು ಶಾಪವಿತ್ತರು. ಅಹಲ್ಯೆ ಕಲ್ಲಾಗಿ ಹೋದಳು. ಚಂದ್ರನಿಗೆ ಹಾಲಿನಂತ ಮೈಯ್ಯಲ್ಲಿ ಕಪ್ಪು ಚುಕ್ಕೆಗಳೆದ್ದವು. 
ನಂತರ ಇಂದ್ರನತ್ತ ತಿರುಗಿದ ಗೌತಮರು, 'ಎಲ್ಲಕ್ಕಿಂತ ಹೆಚ್ಚಾಗಿ ನೀನು ಹುಡುಕುತ್ತಿರುವುದನ್ನು ನಾನು ನೀಡುತ್ತೇನೆ. ನಿಮ್ಮ ನಿರ್ಲಜ್ಜತೆಗೆ ಕಾರಣವಾದ ದೇಹವು ನೀವು ಹುಡುಕುವದರಿಂದ ಮುಚ್ಚಲ್ಪಡಲಿ. ಹೆಣ್ಣಿನ ಲೋಲುಪತೆ ಇರುವ ನಿಮಗೆ ದೇಹದ ತುಂಬಾ ಕಣ್ಣುಗಳೇ ತುಂಬಿ ಹೋಗಲಿ' ಎಂದು ಶಾಪವಿತ್ತರು. ನಂತರ, ಗೌತಮರು ಆಶ್ರಮವನ್ನು ತ್ಯಜಿಸಿ ಹಿಮಾಲಯಕ್ಕೆ ಹೋದರು.

ಕಪ್ಪು, ನೇರಳೆ, ಕಿತ್ತಳೆ.. ನಿಮ್ಮ ರಾಶಿಚಕ್ರದ ಆಧಾರದ ಮೇಲೆ ನೀವು ಧರಿಸಬೇಕಾದ ಬಣ್ಣಗಳಿವು..

'ಸಹಸ್ತ್ರಕಣ್ಣು'
ಈ ರೀತಿ ಇಂದ್ರನು ತನ್ನ ದೇಹದ ಮೇಲೆ ಸಾವಿರ ಕಣ್ಣುಗಳನ್ನು ಹೊಂದಿರುವ ನಪುಂಸಕನಾಗಿ ಕುಸಿದನು. ಇಂದ್ರನ ಸಂಕಟವು ಮೊದಲಿಗೆ ಎಲ್ಲ ಲೋಕಗಳಲ್ಲಿ ಹಾಸ್ಯವಾಯಿತು, ಆದರೆ ನಂತರ ಗಮನಾರ್ಹವಾಗಿ ದುರಂತವಾಯಿತು. ಆತ ಯಾರ ಮುಂದೆ ಎಂದಿಗೂ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಎಲ್ಲ ದೇವರುಗಳಿಗೆ ಹೆಚ್ಚಿನ ಕಾಳಜಿಯನ್ನು ಉಂಟು ಮಾಡಿತು. ಏಕೆಂದರೆ ವಿವಿಧ ಲೋಕಗಳಲ್ಲಿ ಅವನ ಬಹು ವಿಧದ ಕರ್ತವ್ಯ ಸ್ಥಗಿತಗೊಂಡಿತ್ತು. ಇದರಿಂದ ದೇವತೆಗಳೆಲ್ಲ ಇಂದ್ರನ ಪರವಾಗಿ ಬ್ರಹ್ಮನ ಸಹಾಯ ಕೋರಿದರು. 

ಚಾಣಕ್ಯ ನೀತಿ: ಯಶಸ್ಸು ಬೇಕಂದ್ರೆ ಈ ಮಾತುಗಳನ್ನು ಮರೆಯಬೇಡಿ!

ಸಾವಿರ ಯೋನಿಯಿಂದ ಸಾವಿರ ಕಣ್ಣುಗಳವರೆಗೆ
ಬ್ರಹ್ಮನು ಇಂದ್ರನಿಗೆ ಕಠೋರ ತಪಸ್ಸು ಮಾಡಲು ಸೂಚಿಸಿದನು, ತಪಸ್ಸಿನ ಫಲವಾಗಿ ಅವನು ಶಿವನ ಕೃಪೆಗೆ ಪಾತ್ರನಾದನು. ಅವನ ದೇಹದಲ್ಲಿನ ಯೋನಿಗಳೆಲ್ಲ ಕಣ್ಣುಗಳಾಗಿ ರೂಪಾಂತರಗೊಂಡವು. ಅಂದಿನಿಂದ ಅವನು ಸಾವಿರ ಕಣ್ಣುಗಳ ದೇವರೆಂದು ಪರಿಗಣಿಸಲ್ಪಟ್ಟನು.

Latest Videos
Follow Us:
Download App:
  • android
  • ios