ಜಾತಕದಲ್ಲಿ ಗುರುವಿನ ಬಲವಿದ್ದಾಗ ಈ ವೃತ್ತಿಗಳಲ್ಲಿ ನಿಮಗೆ ಯಶ ಖಚಿತ

ಯಾವ ರಾಶಿಗೆ ಯಾವ ವೃತ್ತಿ?
ಜಾತಕದಲ್ಲಿ ಗುರುವಿನ ಬಲವಿದ್ದಾಗ ಯಾವ ವೃತ್ತಿ ಮಾಡಬೇಕು?
ನಿಮ್ಮ ರಾಶಿಗೆ ಕರ್ಮಾಧಿಪತಿ ಯಾರು?
ಕರ್ಮಾಧಿಪತಿಯ ಬಲದ ಮೇಲಿದೆ ನಿಮ್ಮ ವೃತ್ತಿ ಫಲ

Share this Video
  • FB
  • Linkdin
  • Whatsapp

ದೇವಗುರು ಬೃಹಸ್ಪತಿಗೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಗುರು ಗ್ರಹವನ್ನು ಪುತ್ರ, ಜೀವನ ಸಂಗಾತಿ, ಸಂಪತ್ತು, ಶಿಕ್ಷಣ ಮತ್ತು ವೈಭವದ ಅಂಶವೆಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಗುರು ಬಲವಿರುತ್ತದೆಯೋ ಅವರಿಗೆ ವಿವಾಹ ಯೋಗ, ಐಶ್ವರ್ಯ, ಸಮೃದ್ಧಿ, ಮಕ್ಕಳ ಸುಖ, ವಿದ್ಯಾಭ್ಯಾಸ ಚೆನ್ನಾಗಿರುತ್ತದೆ. ಅಂದ ಹಾಗೆ ಜಾತಕದಲ್ಲಿ ಗುರುವಿನ ಬಲ ಇದ್ದಾಗ ಕೆಲವೊಂದು ವೃತ್ತಿಗಳು ಸಂಪೂರ್ಣ ಯಶಸ್ಸನ್ನು ತಂದುಕೊಡುತ್ತವೆ. ಸಮೃದ್ಧಿಯನ್ನು ಆಹ್ವಾನಿಸುತ್ತವೆ.

ಜುಲೈನಲ್ಲಿ ಗುರು ವಕ್ರಿ; ಈ ರಾಶಿಗಳಿಗೆ 4 ತಿಂಗಳು ಯಶಸ್ಸಿನ ಕಾಲ

ನಿಮ್ಮ ಜಾತಕದಲ್ಲೂ ಗುರುವಿನ ಬಲವಿದ್ದರೆ, ನಿಮ್ಮ ರಾಶಿಯ ಕರ್ಮಾಧಿಪತಿ ಗುರುವಾಗಿದ್ದರೆ, ಟೀಚಿಂಗ್, ನ್ಯಾಯ- ಕಾನೂನು ವಿಷಯಗಳು, ಲೈಫ್ ಕೋಚ್, ವಿದ್ಯೆ- ಗುರು ಸ್ಥಾನಕ್ಕೆ ಸಂಬಂಧಿಸಿದ ಎಲ್ಲ ವೃತ್ತಿಗಳು ಸೇರಿದಂತೆ ಸಾಕಷ್ಟು ವೃತ್ತಿಗಳು ನಿಮಗೆ ಆಗಿ ಬರುತ್ತವೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಈ ಬಗ್ಗೆ ವಿವರಗಳನ್ನು ತಿಳಿಯಲು ವಿಡಿಯೋ ನೋಡಿ. 

Related Video