ಶತಮಾನದ ಸಪ್ತಗ್ರಹ ಪಲ್ಲಟ: 5 ರಾಶಿಗಳಿಗೆ ಕಾದಿದೆ ಆಪತ್ತು

ಬರೋಬ್ಬರಿ 90 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ಸಪ್ತ ಗ್ರಹಗಳ ಸಂಚಾರವಾಗುತ್ತಿದೆ. ಈ ಸಂಚಾರದ ಪರಿಣಾಮ ಒಳ್ಳೆಯದಿರುತ್ತೋ ಕೆಟ್ಟದಿರುತ್ತೋ? ಐದು ರಾಶಿಗಳಿಗೆ ಕಂಟಕ ತರುತ್ತೆ ಈ ಸಂಚಾರ.

Share this Video
  • FB
  • Linkdin
  • Whatsapp

ಶುಭಕೃತ ಸಂವತ್ಸರ ಆರಂಭವಾಗಿ ಎರಡು ವಾರ ಕಳೆಯುತ್ತಿದೆಯಷ್ಟೇ. ಈ ವರ್ಷದ ಮೊದಲ ಮಾಸದಲ್ಲೇ ಆಕಾಶಕಾಯಗಳಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಬರೋಬ್ಬರಿ 90 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ಸಪ್ತ ಗ್ರಹಗಳ ಸಂಚಾರವಾಗುತ್ತಿದೆ. 

ಹೌದು, ಸೂರ್ಯ, ಚಂದ್ರರನ್ನು ಬಿಡಿ- ಅವರು ಆಗಾಗ ಮನೆ ಬದಲಿಸುತ್ತಲೇ ಇರುತ್ತಾರೆ. ಆದರೆ ಅತ್ಯಂತ ಪ್ರಮುಖ ಹಾಗೂ ನಿಧಾನಗತಿಯ ಸಂಚಾರದ ಗ್ರಹಗಳಾದ ರಾಹು, ಕೇತು, ಶನಿ, ಗುರು ಗ್ರಹಗಳು ಕೂಡಾ ಈ ತಿಂಗಳಲ್ಲಿ ಮನೆ ಬದಲಿಸುತ್ತಿವೆ. ಒಂದು ಮನೆಯಿಂದ ಮತ್ತೊಂದಕ್ಕೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುವ ಶನಿ ಕೂಡಾ ಈ ತಿಂಗಳ ಕೊನೆಯಲ್ಲಿ ಬೇರೆ ರಾಶಿಗೆ ಪರಿವರ್ತನೆ ಹೊಂದುತ್ತಿದ್ದಾನೆ. ಗುರು ಕೂಡಾ ವರ್ಷಕ್ಕೊಮ್ಮೆ ಮನೆ ಬದಲಿಸುವವನು. ಇಂಥ ದೊಡ್ಡ ದೊಡ್ಡ ಗ್ರಹಗಳೆಲ್ಲ ಮನೆ ಬದಲಿಸುತ್ತಿವೆ ಎಂದರೆ ಅದರ ಪರಿಣಾಮವೂ ದೊಡ್ಡದಾಗಿಯೇ ಇರುತ್ತದೆ. ಬಹುತೇಕ ಎಲ್ಲರ ಬದುಕಲ್ಲೂ ಈ ಬದಲಾವಣೆ ಗೋಚರವಾಗುತ್ತದೆ. ಆದರೆ, ಐದು ರಾಶಿಗಳಿಗೆ ಮಾತ್ರ ಬಹಳ ಆಪತ್ತನ್ನು ತರುತ್ತಿದೆ ಈ ಗ್ರಹಗಳ ಗೋಚಾರ ಎನ್ನುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು. 

Hanuman Jayanti 2022: ರಾಶಿಯನುಸಾರ ಹನುಮಗೆ ನೀವು ಈ ನೈವೇದ್ಯ ನೀಡಿದರೆ ಉತ್ತಮ

ಯಾವ ರಾಶಿಗಳಿಗೆ ಆಪತ್ತಿದೆ? ಯಾವ ಗ್ರಹಗಳ ಕೋಪ ತಾಗುತ್ತದೆ? ಯಾವಾಗ ಎಲ್ಲವೂ ಸರಿ ಹೋಗುತ್ತದೆ.. ಎಲ್ಲ ವಿವರಗಳನ್ನು ನೋಡೋಣ ಬನ್ನಿ. 

Related Video